73 ನೇ ವರ್ಷದ ಗಣರಾಜ್ಯೋತ್ಸವ ಅಂಗವಾಗಿ ಕಡಬ ತಹಶೀಲ್ದಾರ್ ಅನಂತ ಶಂಕರ್ ರಿಂದ ಧ್ವಜಾರೋಹಣ||ಠಾಣಾ ಎಸ್ಐ ರುಕ್ಮ ನಾಯ್ಕ್ ನೇತೃತ್ವದ ಸಿಬ್ಬಂದಿಗಳಿಂದ ಕವಾಯತು

ಶೇರ್ ಮಾಡಿ

ನೇಸರ ಜ26:73 ನೇ ವರ್ಷದ ಗಣರಾಜ್ಯೋತ್ಸವವನ್ನು ಕಡಬ ತಾಲೂಕು ರಾಷ್ಟ್ರೀಯ ಹಬ್ಬಗಳ ಸಮಿತಿಯ ವತಿಯಿಂದ ಕಡಬ ತಾಲೂಕು ಆವರಣದಲ್ಲಿ ಆಚರಿಸಲಾಯಿತು
ವೈವಿಧ್ಯತೆಯಲ್ಲಿ ಏಕತೆಯನ್ನು ಸಾರಿದ ನಮ್ಮ‌ ಭಾರತದ ಸಂವಿಧಾನವು ಪರಮಶ್ರೇಷ್ಠವಾಗಿ ಗುರುತಿಸಿಕೊಂಡಿದೆ. ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುವ ಜವಾಬ್ದಾರಿ ನಮ್ಮ ಮೇಲಿದೆ. ಹಿರಿಯರು ಹಾಕಿದ ನೀತಿ ನಿರೂಪಣೆಯನ್ನು ಮನನ ಮಾಡಿಕೊಳ್ಳುವ ದಿನವಾಗಿ ಈ ಸಂಭ್ರಮವನ್ನು ಆಚರಿಸಬೇಕು. ಸಕಾರಾತ್ಮಕ ಉತ್ತರಗಳನ್ನು ನಮ್ಮೆಲ್ಲ ಪ್ರಶ್ನೆಗಳಿಗೆ ಕಂಡುಕೊಳ್ಳೋಣ ಎಂದು ಆಶಯ ವ್ಯಕ್ತಪಡಿಸೋಣ ಎಂದು ಗಣರಾಜ್ಯೋತ್ಸವದ ಧ್ವಜಾರೋಹಣವನ್ನು ನೆರವೇರಿಸಿದ ಕಡಬ ತಹಶೀಲ್ದಾರ್ ಅನಂತ ಶಂಕರ್ ಹೇಳಿದರು
ಎಲ್ಲರೂ ಧ್ವಜವಂದನೆ ಸಲ್ಲಿಸಿದರು. ಕಡಬ ಠಾಣಾ ಎಸ್ ಐ ರುಕ್ಮಯ್ಯ ನಾಯ್ಕ ಮತ್ತು ಸಿಬ್ಬಂದಿಗಳು ಕವಾಯತು ನಡೆಸಿದರು. ಉಪತಹಶೀಲ್ದಾರ್ ಕೆ ಟಿ ಮನೋಹರ್, ಕಂದಾಯ ನಿರೀಕ್ಷಕ ಅವಿನ್ ರಂಗತ್ತಮಲೆ, ಕಡಬ ತಹಶೀಲ್ದಾರ್ ಕಚೇರಿ ಸಿಬ್ಬಂದಿಗಳು, ಸ್ಥಳೀಯ ಜನಪ್ರತಿನಿಧಿಗಳು ಹಾಜರಿದ್ದರು.

ಜಾಹೀರಾತು

Leave a Reply

error: Content is protected !!