ನೆಲ್ಯಾಡಿ: ಅಕ್ರಮ ಮರ ಸಾಗಾಟ; ಸೊತ್ತು ಸಮೇತ ಲಾರಿ ಹಾಗೂ ಓರ್ವನ ಬಂಧನ

ಶೇರ್ ಮಾಡಿ

ನೆಲ್ಯಾಡಿ: ರಾಷ್ಟ್ರೀಯ ಹೆದ್ದಾರಿ 75ರ ನೆಲ್ಯಾಡಿ ಸಮೀಪದ ಹೊಸಮಜಲು ಎಂಬಲ್ಲಿ ಲಾರಿಯಲ್ಲಿ ಅಕ್ರಮವಾಗಿ ಮರಸಾಗಿಸುತ್ತಿರುವುದರ ಬಗ್ಗೆ ಖಚಿತ ಮಾಹಿತಿಯನ್ನು ಪಡೆದ ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಜಯಪ್ರಕಾಶ್ ಕೆ. ಕೆ ಅವರ ಮಾರ್ಗದರ್ಶನದಂತೆ ಕಾರ್ಯಾಚರಣೆ ನಡೆಸಿ ಸೊತ್ತು ಸಮೇತ ಲಾರಿ ಹಾಗೂ ಓರ್ವನ್ನು ಬಂಧಿಸಲಾಗಿದೆ.

ಬಂಧಿತ ಆರೋಪಿ ಸಕಲೇಶಪುರದ ರಜಾಕ್ ಎಂದು ಗುರುತಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಉಪವಲಯಾರಣ್ಯಾಧಿಕಾರಿ ಸಂದೀಪ್ ಸಿ.ಕೆ, ರಾವುತ್ತಪ್ಪ ಬಿರಾದಾರ್, ಅರಣ್ಯ ರಕ್ಷಕರಾದ ರಾಜೇಶ್, ದಿನೇಶ್ ಭಾಗಿ ಯಾಗಿದ್ದರು.

Leave a Reply

error: Content is protected !!