ಮೀನು ಹಿಡಿಯಲು ತೆರಳಿದ್ದ ಇಬ್ಬರು ಯುವಕರು ನೀರುಪಾಲು

ಶೇರ್ ಮಾಡಿ

ಮೀನು ಹಿಡಿಯಲು ತೆರಳಿದ್ದ ಇಬ್ಬರು ಯುವಕರುನೀರು ಪಾಲಾದ ಘಟನೆ ಶಿವಮೊಗ್ಗದ ಕುರುಬರಪಾಳ್ಯ ಬಳಿ ನಡೆದಿದೆ.

ತುಂಗಾನದಿಯಲ್ಲಿ ನೀರು ಪಾಲಾದವರನ್ನು ಮಹಮ್ಮದ್ ಫೈಸಲ್(19) ಹಾಗೂ ಅಂಜುಂಖಾನ್ (19) ಎಂದು ಗುರುತಿಸಲಾಗಿದೆ. ಸವಾಯಿಪಾಳ್ಯದ ಮಹಮ್ಮದ್ ಫೈಸಲ್ ಹಾಗೂ ಇಲಿಯಾಜ್ ನಗರದ ಅಂಜುಂಖಾನ್ ಪದವಿ ವಿದ್ಯಾರ್ಥಿಗಳಾಗಿದ್ದು, ಇಬ್ಬರೂ ಸ್ನೇಹಿತರಾಗಿದ್ದರು.

ಸೋಮವಾರ ಮಧ್ಯಾಹ್ನ ತುಂಗಾನದಿಯಲ್ಲಿ ಮೀನು ಹಿಡಿಯಲು ತೆರಳಿದ್ದ ವೇಳೆ ಇಬ್ಬರೂ ನೀರು ಪಾಲಾಗಿದ್ದು, ಮಹಮ್ಮದ್ ಫೈಸಲ್ ಮೃತದೇಹ ಪತ್ತೆಯಾಗಿದೆ. ಅಂಜುಂಖಾನ್ ಮೃತದೇಹಕ್ಕಾಗಿ ನದಿಯಲ್ಲಿ ಶೋಧಕಾರ್ಯ ಮುಂದುವರೆದಿದೆ.

ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯ ಮೀನುಗಾರರು ನದಿಯಲ್ಲಿ ಶೋಧಕಾರ್ಯ ನಡೆಸುತ್ತಿದ್ದಾರೆ. ಘಟನೆಯಿಂದ ಕುಟುಂಬಸ್ಥರ ರೋದನೆ ಮುಗಿಲು ಮುಟ್ಟಿದೆ. ಈ ಕುರಿತು ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

error: Content is protected !!