ಕುದಿಯೋ ನೀರಿಗೆ ಮೆಣಸಿನ ಹುಡಿ ಬೆರೆಸಿ ಪತಿ ಮೇಲೆ ಎರಚಿ ಬೆದರಿಕೆ ಹಾಕಿದ್ಳು ಪತ್ನಿ..!

ಶೇರ್ ಮಾಡಿ

ಪತ್ನಿಯೊಬ್ಬಳು ಕುದಿಯುತ್ತಿರುವ ನೀರಿಗೆ ಖಾರದ ಪುಡಿ ಬೆರೆಸಿ ಪತಿ ಮೇಲೆ ಎರಚಿದ ಪ್ರಸಂಗವೊಂದು ಉಡುಪಿಯ ಕಟಪಾಡಿ ಸಮೀಪದ ಮಣಿಪುರದಲ್ಲಿ ನಡೆದಿದೆ.

ಅಕ್ಟೋಬರ್ ತಿಂಗಳಲ್ಲಿ ಅಫ್ರೀನ್ ಹಾಗೂ ಮೊಹಮ್ಮದ್ ಆಸಿಫ್ ಮದುವೆಯಾಗಿತ್ತು. ಮದುವೆಯಾದ ಬಳಿಕ ಅಫ್ರೀನ್ ಮನೆಯಲ್ಲೇ ಗಂಡ-ಹೆಂಡತಿ ಇದ್ದರು. ಅಫ್ರೀನ್‍ಳಿಗೆ ಮೊಹಮ್ಮದ್ ಆಸೀಫ್ ಬೇರೆ ಹುಡುಗಿಯೊಂದಿಗೆ ಸಂಬಂಧ ಹೊಂದಿರುವುದಾಗಿ ಅನುಮಾನ ವ್ಯಕ್ತವಾಗಿತ್ತು. ಈ ಬಗ್ಗೆ ಆಗಾಗ್ಗೆ ಜಗಳವಾಡುತ್ತಿದ್ದಳೆನ್ನಲಾಗಿದೆ.

ಸೆ.17ರಂದು ಸಂಜೆ ಇದೇ ವಿಚಾರಕ್ಕೆ ಮನೆಯಲ್ಲಿ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು. ಜಗಳ ನಡೆದು ಪತಿ ಬಾತ್ ರೂಮ್‍ನಿಂದ ಹೊರ ಬರುವಾಗ ಮೆಣಸಿನ ಹುಡಿ ಮಿಶ್ರಿತ ಕುದಿಯುವ ನೀರನ್ನು ಪತ್ನಿ ಎರಚಿದ್ದಾಳೆ. ಬಳಿಕ ಗಾಯಗೊಂಡ ಪತಿಯನ್ನು ರೂಮಿನಲ್ಲಿಯೇ ಕೂಡಿ ಹಾಕಿದಾಳೆ. ಅಲ್ಲದೆ ಬೇರೆಯವರಿಗೆ ತಿಳಿಸಿದ್ರೆ ಕೊಲ್ಲುವುದಾಗಿ ಜೀವ ಬೆದರಿಕೆ ಹಾಕಿದ್ದಾಳೆ.

ಘಟನೆಯಲ್ಲಿ ಮುಖ, ದೇಹ, ಎಡಗೈ, ಎದೆ, ಬೆನ್ನು ಬಲಕೈ ಸುಟ್ಟು ಹೋಗಿ ಗಂಭೀರವಾಗಿ ಗಾಯಗೊಂಡಿರುವ ಆಸಿಫ್ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಬಗ್ಗೆ ಪತಿ ಮೊಹಮ್ಮದ್ ಆಸೀಫ್ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Leave a Reply

error: Content is protected !!