ಗಣೇಶ ಮೂರ್ತಿಗೆ ಪೂಜೆ ಮಾಡಿದ್ದಕ್ಕೆ ವಿದ್ಯಾರ್ಥಿನಿ ಕೈ ಮುರಿದ ಹೆಡ್‍ಮಾಸ್ಟರ್!

ಶೇರ್ ಮಾಡಿ

ಶಾಲೆಯಲ್ಲಿ ಗಣೇಶ ಮೂರ್ತಿಗೆ ಪೂಜೆ ಮಾಡಿದ್ದಕ್ಕೆ ವಿದ್ಯಾರ್ಥಿನಿಯ ಕೈಯನ್ನು ಹೆಡ್‍ಮಾಸ್ಟರ್ ಮುರಿದ ಪ್ರಸಂಗವೊಂದು ಕೋಲಾರದಲ್ಲಿ ನಡೆದಿದೆ.

ಸದ್ಯ ಪ್ರಕರಣ ಸಂಬಂಧ ಕೋಲಾರ ಡಿಡಿಪಿಐ ಕೃಷ್ಣಮೂರ್ತಿಯವರು ಮುಖ್ಯ ಶಿಕ್ಷಕಿಯನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಜೊತೆಗೆ ಬಾಲಕಿಯ ಚಿಕಿತ್ಸೆಗೆ ತಗುಲುವ ಖರ್ಚು ವೆಚ್ಚವನ್ನು ಕೂಡ ಮುಖ್ಯ ಶಿಕ್ಷಕಿಯೇ ಭರಿಸಬೇಕೆಂದು ಸೂಚನೆ ನೀಡಲಾಗಿದೆ.

ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಅಲ್ಲಿಕಲ್ಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ ವಾರ ಈ ಘಟನೆ ನಡೆದಿತ್ತು. ಮುಖ್ಯ ಶಿಕ್ಷಕಿಯು ವಿದ್ಯಾರ್ಥಿನಿ ಭವ್ಯಶ್ರೀ ಥಳಿಸಿ ಎಡ ಕೈ ಮುರಿದಿದ್ದರು. ಈ ಸಂಬಂಧ ಪೋಷಕರು ಶಾಲಾ ಮುಖ್ಯ ಶಿಕ್ಷಕಿ ವಿರುದ್ಧ ದೂರು ಸಲ್ಲಿಸಿದ್ದರು. ಕೆಜಿಎಫ್ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೂ ಪೋಷಕರು ದೂರು ನೀಡಿದ್ದರು. ಹೀಗಾಗಿ ಶಿಕ್ಷಣಾಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ವಿದ್ಯಾರ್ಥಿನಿಯ ಯೋಗ ಕ್ಷೇಮ ವಿಚಾರಿಸಿದ್ದರು.

ಮುಖ್ಯ ಶಿಕ್ಷಕಿ ಹೇಮಲತಾರನ್ನ ವರ್ಗಾವಣೆ ಮಾಡುವಂತೆ ಪೋಷಕರ ಪಟ್ಟು ಹಿಡಿದಿದ್ದರು. ಈ ವೇಳೆ ಶಿಕ್ಷಣಾಧಿಕಾರಿ ಮುನಿವೆಂಕಟ ರಾಮಾಚಾರಿ ಅವರು ಶಾಲಾ ಮಕ್ಕಳ ಪೋಷಕರಿಗೆ ಭರವಸೆ ನೀಡಿದ್ದರು. ಅಂತೆಯೇ ಇದೀಗ ಮುಖ್ಯ ಶಿಕ್ಷಕಿಯ ಅಮಾನತು ಮಾಡಿ ಡಿಡಿಪಿಐ ಆದೇಶ ಹೊರಡಿಸಿದ್ದಾರೆ.

Leave a Reply

error: Content is protected !!