ಕಡಬ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ 73ನೇ ಗಣರಾಜ್ಯೋತ್ಸವ

ಶೇರ್ ಮಾಡಿ

ನೇಸರ ಜ.27: ಕಡಬ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ 73ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸಹಯೋಗದಲ್ಲಿ ಆಚರಿಸಲಾಯಿತು.ಸಂಸ್ಥೆಯ ಪ್ರಾಚಾರ್ಯರಾದ ಜನಾರ್ದನ.ಕೆ.ಎನ್.ದ್ವಜಾರೋಹಣ ನೆರವೇರಿಸಿದರು.

ಸಭಾ ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿ ಪ್ರಾಂಶುಪಾಲರು ರಾಷ್ಟ್ರೀಯ ಹಬ್ಬಗಳ ಆಚರಣೆಯ ಪಟ್ಟಿಯಲ್ಲಿ ಗಣರಾಜ್ಯೋತ್ಸವ ಆಚರಣೆಗೆ ವಿಶೇಷ ಪ್ರಾಮುಖ್ಯತೆ ಯಾಕೆ ಇದೆ ಎಂಬುದನ್ನು ವಿವರಿಸಿದರು ಹಾಗೂ ಎಲ್ಲರಿಗೂ  ಶುಭಾಶಯ ಕೋರಿದರು.ಕುಮಾರಿ ವರ್ಷಿತ ದಿನದ ಪ್ರಾಮುಖ್ಯತೆಯ ಕುರಿತು ಭಾಷಣ ಮಾಡಿದರು.ಉಪನ್ಯಾಸಕರಾದ ವಾಸುದೇವಗೌಡ, ಸಲೀನ್.ಕೆ.ಪಿ,ಜ್ಞಾನೇಶ್ವರ. ಎಸ್,ಮಹದೇವ.ಶೆಟ್ಟಿ,ಸುಕೇಶಚಂದ್ರಶೇಖರ,ಶ್ರೀಮತಿ ಲಾವಣ್ಯ,ವಿದ್ಯಾರ್ಥಿ ಸಂಘದ ನಾಯಕ ಅಬ್ದುಲ್ ಅಝೀಝ್,ಕಾರ್ಯದರ್ಶಿ ಮನ್ವಿತ್, ಸಾಂಸ್ಕೃತಿಕ ಕಾರ್ಯದರ್ಶಿ ಕುಮಾರಿ ನವ್ಯ ಕಾರ್ಯಕ್ರಮ ಆಯೋಜಿಸಲು ಸಹಕರಿಸಿದರು.ಎನ್ಎಸ್ಎಸ್ ಕುಮಾರಿ ಸ್ವಯಂಸೇವಕರಾದ ಸರಿತಾ.ಪಿ.ಟಿ. ಸ್ವಾಗತಿಸಿ, ಕುಮಾರಿ ವರ್ಷಾ ವಂದಿಸಿ.ಕುಮಾರಿ ಸಂದ್ಯಾ ಕಾರ್ಯಕ್ರಮ ನಿರೂಪಿಸಿದರು.

ಗಣರಾಜ್ಯೋತ್ಸವ ಪ್ರಯುಕ್ತ ಕಾಲೇಜಿನ ವಾಣಿಜ್ಯ ಶಾಸ್ತ್ರ ಉಪನ್ಯಾಸಕರಾದ ಸುಕೇಶ ಚಂದ್ರಶೇಖರ ನೇತೃತ್ವದಲ್ಲಿ ವಿದ್ಯಾರ್ಥಿಗಳಿಗೆ ಕಬಡ್ಡಿ ಮತ್ತು ವಿದ್ಯಾರ್ಥಿನಿಯರಿಗಾಗಿ ಹಗ್ಗ ಜಗ್ಗಾಟ ಪಂದ್ಯಾಟಗಳನ್ನು ಆಯೋಜಿಸಲಾಯಿತು.ಕಳೆದ ಎರಡು ವರ್ಷಗಳಿಂದ  ಕ್ರೀಡಾಂಗಣದಿಂದ ದೂರವಾಗಿದ್ದ ವಿದ್ಯಾರ್ಥಿಗಳಿಗೆ ಈ ಪಂದ್ಯಾಟವು ಹೊಸ ಹುರುಪು ನೀಡಿತು.

Leave a Reply

error: Content is protected !!