ಉದನೆ ಸೈಂಟ್ ಆಂಟನೀಸ್ ವಿದ್ಯಾಸಂಸ್ಥೆ ತಾಲೂಕು ಮಟ್ಟದ ಪ್ರೌಢ ಶಾಲಾ ಬಾಲಕ,ಬಾಲಕಿಯರ ತ್ರೋಬಾಲ್ ಪಂದ್ಯಾಟ

ಶೇರ್ ಮಾಡಿ

ಕ್ರೀಡೆಯಿಂದ ಸ್ವಾವಲಂಬಿ ಬದುಕು ಸಾಧ್ಯ- ಶಾಸಕಿ ಕು.ಭಾಗೀರಥಿ ಮುರುಳ್ಯ
ಸ್ಪರ್ಧೆ ಜಯವನ್ನು ಗುರುತಿಸಲು ಮಾತ್ರ.ರೆ.ಫಾ ಹನಿ ಜೇಕಬ್

ಉದನೆ: ಇಲ್ಲಿನ ಸೈಂಟ್ ಆಂಟನೀಸ್ ವಿದ್ಯಾಸಂಸ್ಥೆಯಲ್ಲಿ ಪುತ್ತೂರು ತಾಲೂಕು ಮಟ್ಟದ ಪ್ರೌಢ ಶಾಲಾ ಬಾಲಕ,ಬಾಲಕಿಯರ ತ್ರೋಬಾಲ್ ಪಂದ್ಯಾಟ ನಡೆಯಿತು.

ಸುಳ್ಳ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಕು.ಭಾಗೀರಥಿ ಮುರುಳ್ಯ ಕ್ರೀಡಾಕೂಟವನ್ನು ದೀಪ ಬೆಳಗಿಸಿವುದರ ಮೂಲಕ ಉದ್ಘಾಟಿಸಿ ವಿದ್ಯಾರ್ಥಿಗಳು ಕ್ರೀಡಾಮನೋಭಾವ ಬೆಳೆಸುವುದರಿಂದ ಸ್ವಾವಲಂಬಿ ಜೀವನ ನಡೆಸುವ ಶಕ್ತಿ ಮತ್ತು ಧೈರ್ಯ ಬರುವುದು‌. ಪ್ರತಿಯೊಬ್ಬರು ಕ್ರೀಡಾ ಸ್ಪೂರ್ಥಿ ಬೆಳೆಸಿಕೊಳ್ಳಬೇಕು ಎಂದು ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.

ಸಂಚಾಲಕರಾದ ರೆ‌.ಫಾ ಹನಿ ಜೇಕಬ್ ಮಾತನಾಡಿ ಸ್ಪರ್ಧೆಯನ್ನು ವ್ಯಕ್ತಿಗತವಾಗಿ ನೋಡಬಾರದು.ಸ್ಪರ್ಧೆ ಎಲ್ಲ ಕಡೆ ಇರುತ್ತದೆ. ಆಗ ಮಾತ್ರ ನಾವು ವಿಜಯವನ್ನು ಗುರುತಿಸಲು ಸಾಧ್ಯ ಎಂದು ಹೇಳಿ ಶುಭ ಹಾರೈಸಿದರು.
ಜಿಲ್ಲಾ ದೈ.ಶಿಕ್ಷಕರ ಸಂಘದ ಕಾರ್ಯಾಧ್ಯಕರು ಹಾಗೂ ರಾಜ್ಯ ದೈ.ಶಿಕ್ಷಕರ ಸಂಘದ ಸದಸ್ಯರಾದಮಾಮಚ್ಚನ್ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.

ಸಭಾಧ್ಯಕ್ಷತೆ ವಹಿಸಿದ ಶಿರಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕಾರ್ತಿಕೇಯನ್ ಎಲ್ಲ ಆಟಗಾರರಿಗೆ ಶುಭ ಹಾರೈಸಿದರು. ವೇದಿಕೆಯಲ್ಲಿ ಶಿರಾಡಿ ಗ್ರಾಮ ಪಂಚಾಯತ್ ಸದಸ್ಯರಾದ ಲಕ್ಷ್ಮಣ ಗೌಡ ಕುದ್ಕೋಳಿ, ಶ್ರೀಮತಿ ರಾಧ ತಂಗಪ್ಪನ್, ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಜಿಮ್ಸನ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರುಗಳಾದ ಜಯಪ್ರಕಾಶ್ ಎಂ, ಮೇಹಿ ಜಾರ್ಜ್, ಆಡಳಿತ ಅಧಿಕಾರಿ ಕೆ.ಕೆ ಜಾನ್, ದೈಹಿಕ ಶಿಕ್ಷಣ ಶಿಕ್ಷಕರಾದ ಜಿಮ್ಸನ್ ವರ್ಗೀಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮಾಜಿ ತಾಲೂಕು ಪಂಚಾಯತ್ ಸದಸ್ಯರು ಹಾಗೂ ಪಿ.ಎಲ್ ಡಿ ಬ್ಯಾಂಕ್ ಅಧ್ಯಕ್ಷರಾದ ಭಾಸ್ಕರ ಗೌಡ ಇಚ್ಲಂಪಾಡಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಬಾಲಕೃಷ್ಣ ಬಾಣಜಾಲು, ಹಿರಿಯ ವಕೀಲ ಶಿವಪ್ರಸಾದ್ ಪುತ್ತಿಲ, ಶಿಕ್ಷಕ, ಶಿಕ್ಷಕೇತರ ವೃಂದ, ವಿವಿಧ ಶಾಲೆಗಳಿಂದ ಆಗಮಿಸಿದ ಕ್ರೀಡಾಪಟುಗಳು, ದೈಹಿಕ ಶಿಕ್ಷಕರು, ಶಿಕ್ಷಕ ರಕ್ಷಕ ಸಂಘದ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸೈಂಟ್ ಆಂಟನೀಸ್ ಪೌಢ ಶಾಲೆಯ ಮುಖ್ಯಗುರುಗಳಾದ ಶ್ರೀಧರ ಗೌಡ ಸ್ವಾಗತಿಸಿ, ದೈಹಿಕ ಶಿಕ್ಷಣ ಶಿಕ್ಷಕರಾದ ರಾಜೇಶ್ ರೈ ವಂದಿಸಿದರು. ಶಿಕ್ಷಕ ಯಶೋಧರ ನಿರೂಪಿಸಿದರು.

Leave a Reply

error: Content is protected !!