ಚೈತ್ರಾ & ಗ್ಯಾಂಗ್‍ನ ಸಿಸಿಬಿ ಕಸ್ಟಡಿ ಅಂತ್ಯ- ಮತ್ತೆ ಕಸ್ಟಡಿಗಾ?, ಪರಪ್ಪನ ಅಗ್ರಹಾರಕ್ಕಾ?

ಶೇರ್ ಮಾಡಿ

ಚೈತ್ರಾ ಕುಂದಾಪುರ & ಗ್ಯಾಂಗ್‍ನಿಂದ ಉದ್ಯಮಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದಿಗೆ ಆರೋಪಿಗಳ ಪೊಲೀಸ್ ಕಸ್ಟಡಿ ಅಂತ್ಯವಾಗಲಿದೆ. ಹೀಗಾಗಿ 7 ಆರೋಪಿಗಳನ್ನು ಕೇಂದ್ರ ಅಪರಾಧ ವಿಭಾಗ ಕೋರ್ಟಿಗೆ ಹಾಜರುಪಡಿಸಲಿದ್ದಾರೆ.

ಚೈತ್ರಾ ಕುಂದಾಪುರ, ಗಗನ್ ಕಡೂರು, ರಮೇಶ್, ಚೆನ್ನನಾಯ್ಕ್, ಧನರಾಜ್ ಹಾಗೂ ಶ್ರೀಕಾಂತ್ ಸೇರಿ 7 ಆರೋಪಿಗಳನ್ನ ಪೊಲೀಸರು ಕೋರ್ಟ್‍ಗೆ ಹಾಜರುಪಡಿಸಲಿದ್ದಾರೆ. ಪ್ರಕರಣ ಸಂಬಂಧ ಅಭಿನವ ಹಾಲಶ್ರೀ ಹೊರತುಪಡಿಸಿ ಎಲ್ಲಾ ಬಂಧಿತ ಆರೋಪಿಗಳು ಕೋರ್ಟ್ ಮುಂದೆ ಹಾಜರಾಗಲಿದ್ದಾರೆ.

ಏಳು ಆರೋಪಿಗಳ ವಿಚಾರಣೆ ಬಹುತೇಕ ಅಂತ್ಯವಾದ ಹಿನ್ನೆಲೆ ಮತ್ತೆ ಕಸ್ಟಡಿಗೆ ಕೇಳದಿರಲು ನಿರ್ಧಾರ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಬಂಧಿತ ಆರೋಪಿಗಳನ್ನ ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಆದೇಶಿಸುವ ಸಾಧ್ಯತೆ ಇದೆ.

Leave a Reply

error: Content is protected !!
%d