ನೀವು ಎಸ್‌ಎಸ್‌ಎಲ್‌ಸಿ ಪಾಸಾಗಿ, ಸರ್ಕಾರಿ ಹುದ್ದೆಗೆ ಸೇರಬೇಕು ಅಂದುಕೊಂಡಿದ್ದಲ್ಲಿ ಇದೀಗ ಸದಾವಕಾಶವೊಂದಿದೆ. ಕರ್ನಾಟಕ ಅರಣ್ಯ ಇಲಾಖೆಯು ಅರಣ್ಯ ವೀಕ್ಷಕ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚಿಸಿದೆ. ಹುದ್ದೆಗಳಿದ್ದು ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ.
ಗ್ರೂಪ್ ಡಿ ಸರ್ಕಾರಿ ಹುದ್ದೆ ಇವಾಗಿದ್ದು, ಆಕರ್ಷಕ ಸಂಬಳವನ್ನು ಜತೆಗೆ ಇತರೆ ಭತ್ಯೆಗಳನ್ನು ನೀಡಲಾಗುತ್ತದೆ. 10ನೇ ತರಗತಿ ಅಥವಾ ತತ್ಸಮಾನ ವಿದ್ಯಾರ್ಹತೆ ಪಾಸಾದವರು ಅರ್ಜಿ ಹಾಕಬಹುದು.
ನೇಮಕಾತಿ ಪ್ರಾಧಿಕಾರ : ಕರ್ನಾಟಕ ಅರಣ್ಯ ಇಲಾಖೆ
ಹುದ್ದೆ ಹೆಸರು : ಅರಣ್ಯ ವೀಕ್ಷಕ (Forest Watcher)
ಶೈಕ್ಷಣಿಕ ಅರ್ಹತೆ : 10ನೇ ತರಗತಿ / ತತ್ಸಮಾನ ವಿದ್ಯಾರ್ಹತೆ ಪಾಸ್.
ನೇಮಕಾತಿ ವಿಧಾನ : ಸ್ಪರ್ಧಾತ್ಮಕ ಪರೀಕ್ಷೆ, PET / PST / ವೈದ್ಯಕೀಯ ಪರೀಕ್ಷೆ ಮೂಲಕ.
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 27-09-2023
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 26-10-2023
ಅರ್ಜಿ ಶುಲ್ಕ ಪಾವತಿಗೆ ಕೊನೆ ದಿನಾಂಕ : 31-10-2023
ಅರಣ್ಯ ವೀಕ್ಷಕರ ಹುದ್ದೆಗಳಿಗೆ ಅಧಿಸೂಚನೆ, ಪರೀಕ್ಷೆ ಪಠ್ಯಕ್ರಮ, ಆನ್‌ಲೈನ್ ಅಪ್ಲಿಕೇಶನ್ ಲಿಂಕ್ ಅನ್ನು ಕರ್ನಾಟಕ ಅರಣ್ಯ ಇಲಾಖಾ ವೆಬ್‌ಸೈಟ್ https://aranya.gov.in ನ ಮುಖಪುಟದಲ್ಲಿ ಸೆಪ್ಟೆಂಬರ್ 27 ರಂದು ಲಿಂಕ್ ಆಕ್ಟಿವೇಟ್ ಮಾಡಲಾಗುತ್ತದೆ.
ಆನ್‌ಲೈನ್ ಅಪ್ಲಿಕೇಶನ್ ಸಲ್ಲಿಸಲು ಎಸ್‌ಎಸ್‌ಎಲ್‌ಸಿ / ತತ್ಸಮಾನ ವಿದ್ಯಾರ್ಹತೆ ಅಂಕಪಟ್ಟಿ, ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಇ-ಮೇಲ್ ವಿಳಾಸ, ಮೊಬೈಲ್ ನಂಬರ್, ಇತರೆ ಮಾಹಿತಿಗಳು ಅಗತ್ಯವಾಗಿ ಬೇಕು.
ಅರ್ಜಿಯನ್ನು ಆನ್‌ಲೈನ್ ಮೂಲಕ ಮಾತ್ರ ಸಲ್ಲಿಸಬೇಕು. ಅಂಚೆ, ಕೊರಿಯರ್ ಅಥವಾ ಇತರೆ ಯಾವುದೇ ಮಾರ್ಗದಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಇಲ್ಲ.