ಕನ್ನಡದ ಬಿಗ್ ಬಾಸ್ ಸೀಸನ್ 10 ಶೋ: ಯಾವಾಗಿಂದ ಶುರು, ಯಾರೆಲ್ಲ ಇರಲಿದ್ದಾರೆ?

ಶೇರ್ ಮಾಡಿ

ಕನ್ನಡದ ಬಿಗ್ ಬಾಸ್ ಸೀಸನ್ 10 ಶೋ ಕುರಿತಂತೆ ಮಹತ್ವದ ಸುದ್ದಿಯೊಂದು ಬಂದಿದೆ. ಈ ಶೋ ಯಾವಾಗಿಂದ ಶುರುವಾಗಲಿದೆ ಎನ್ನುವುದಕ್ಕೆ ವಾಹಿನಿಯೇ ದಿನಾಂಕವನ್ನು ಘೋಷಣೆ ಮಾಡಿದೆ. ಅಕ್ಟೋರ್ 7 ಮತ್ತು 8ರಂದು ಎರಡು ದಿನಗಳ ಕಾಲ ಪ್ರವೇಶದ ಸಂಚಿಕೆಗಳು ಪ್ರಸಾರವಾಗಲಿದ್ದು, ಅಧಿಕೃತ ಆಟ ಅಕ್ಟೋಬರ್ 9ರಿಂದ ಬಿಗ್ ಬಾಸ್ ಮನೆಯಲ್ಲಿ ಶುರುವಾಗಲಿದೆ.

ಬಿಗ್ ಬಾಸ್ 10 ಶೋಗೆ ಕ್ಷಣಗಣನೆ ಶುರುವಾಗಿದೆ. ಸದ್ಯದಲ್ಲೇ ಪ್ರಸಾರವಾಗಲಿರುವ ಬಿಗ್ ಬಾಸ್ ಶೋ ಕುರಿತಂತೆ ಈ ಹಿಂದೆ ಸಣ್ಣದೊಂದು ಝಲಕ್ ಬಿಟ್ಟಿದ್ದರೆ, ಉಳಿದಂತೆ ಯಾವುದೇ ಆಸಕ್ತಿ ಹುಟ್ಟಿಸುವಂತೆ ಪ್ರೊಮೋ ರಿಲೀಸ್ ಮಾಡಿರಲಿಲ್ಲ. ಹಾಗಾಗಿ ಸುದೀಪ್ ಅಭಿಮಾನಿಗಳಿಗೆ ಬೇಸರವಾಗಿತ್ತು. ಮೊನ್ನೆಯಷ್ಟೇ ಬೇಸರವನ್ನು ನಿವಾರಿಸುವಂತಹ ಪ್ರೊಮೋವನ್ನು ವಾಹಿನಿ ರಿಲೀಸ್ ಮಾಡಿತ್ತು.

ರಿಲೀಸ್ ಮಾಡಿರುವ ಪ್ರೊಮೋದಲ್ಲಿ ಕಿಚ್ಚ ಸುದೀಪ್ ಕಾಣಿಸಿಕೊಂಡಿದ್ದರು. ಜೊತೆಗೊಂದು ಊರ ಹಬ್ಬದ ಕಾನ್ಸೆಪ್ಟ್ ನೊಂದಿಗೆ ವಿಡಿಯೋ ರಿಲಿಸ್ ಆಗಿತ್ತು. ಈ ಬಾರಿ ನೂರು ದಿನಗಳ ಹಬ್ಬವೆಂಬ ಕಾನ್ಸೆಪ್ಟ್ ನಲ್ಲಿ ಪ್ರೊಮೋ ಮಾಡಲಾಗಿತ್ತು. ಈ ಹಬ್ಬಕ್ಕಾಗಿ ಯಾರೆಲ್ಲ ಕಾಯುತ್ತಿದ್ದಾರೆ ಎನ್ನುವುದನ್ನು ಹೇಳಲಾಗಿತ್ತು. ಈ ಪ್ರೊಮೋ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಈ ಬಾರಿ ವಾಹಿನಿಯು ಒಟಿಟಿ ಬಿಗ್ ಬಾಸ್ ಯೋಜನೆಗೆ ಬ್ರೇಕ್ ಹಾಕಿ, ಬಿಗ್ ಬಾಸ್ ಸೀಸನ್ 10ಕ್ಕೆ ತೆರೆಮರೆಯಲ್ಲಿ ಸಿದ್ಧತೆ ನಡೆಯುತ್ತಿದೆ. ಈ ಮೂಲಕ ಟಿವಿ ಬಿಗ್ ಬಾಸ್ ಅಭಿಮಾನಿಗಳಿಗೆ ಸಿಹಿಸುದ್ದಿ ಸಿಕ್ಕಿದೆ.

Leave a Reply

error: Content is protected !!