ಉಜಿರೆ ಶ್ರೀ ಧ.ಮಂ ಪ.ಪೂ ಕಾಲೇಜು ರಾ.ಸೇ ಯೋಜನಾ ದಿನಾಚರಣೆ ಹಾಗೂ ಪ್ರಾಚಾರ್ಯರಿಗೆ ಅಭಿನಂದನೆ

ಶೇರ್ ಮಾಡಿ

ಉಜಿರೆ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ರಾಷ್ಟ್ರೀಯ ಸೇವಾ ಯೋಜನೆಯ ದಿನಾಚರಣೆ ಕಾರ್ಯಕ್ರಮ ನಡೆಯಿತು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯರಾದ ಪ್ರಮೋದ್ ಕುಮಾರ್ ಅವರು ರಾಷ್ಟ್ರೀಯ ಸೇವಾ ಯೋಜನೆಯ ಪ್ರಯೋಜನ ಹಾಗೂ ಯುವ ಶಕ್ತಿ ಬಳಕೆಯ ಬಗ್ಗೆ ಮಾತನಾಡಿದರು.

ಅಭ್ಯಾಗತರಾದ ಹಿರಿಯ ವಿದ್ಯಾರ್ಥಿ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತ ಹಿರಿಯ ಸ್ವಯಂ ಸೇವಕ ಧನುಷ್ ಕೆ.ಪಿ. ಅವರು ಯೋಜನೆಯ ಸ್ವಯಂ ಸೇವಕರ ವ್ಯಕ್ತಿತ್ವ ವಿಕಸನದೊಂದಿಗೆ ಜವಾಬ್ಧಾರಿಗಳನ್ನು ಹೇಗೆ ನಿಭಾಯಿಸಲು ಸಾಧ್ಯ ಎಂದು ರಾ.ಸೇ ಯೋಜನೆಯಿಂದ ತಿಳಿಯಬಹುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ದ.ಕ ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘದಿಂದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಪ್ರಾಚಾರ್ಯ ಪ್ರಮೋದ್ ಕುಮಾರ್ ಅವರನ್ನು ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಸನ್ಮಾನಿಸಲಾಯಿತು.

ಕಾಲೇಜಿನ ಸಹ ಪ್ರಾಚಾರ್ಯ ಡಾ.ರಾಜೇಶ್ ಬಿ, ರಾಷ್ಟ್ರೀಯ ಸೇವಾ ಯೋಜನೆಯ ಸಲಹಾ ಸಮಿತಿಯ ಸದಸ್ಯರಾದ ದಿವ್ಯಾ ಕುಮಾರಿ, ರಾಜೇಶ್ ಕಲ್ಲಬೆಟ್ಟು, ನಾಗರಾಜ್ ಭಂಡಾರಿ, ರಾ.ಸೇ ಯೋಜನಾಧಿಕಾರಿ ಡಾ.ಪ್ರಸನ್ನಕುಮಾರ ಐತಾಳ್, ಸಹ ಯೋಜನಾಧಿಕಾರಿ ಪದ್ಮಶ್ರೀ ರಕ್ಷಿತ್ ಉಪಸ್ಥಿತರಿದ್ದರು.

ಪ್ರಥಮ್ ಸ್ವಾಗತಿಸಿ ನಿರೂಪಿಸಿದರು. ಪಲ್ಲವಿ ಪರಿಚಯಿಸಿದರು. ಘಟಕದ ನಾಯಕಿ ದಕ್ಷಾ ವಂದಿಸಿದರು. 

Leave a Reply

error: Content is protected !!