ವಿದ್ಯುತ್‌ ಕಂಬಕ್ಕೆ ಬಸ್‌ ಢಿಕ್ಕಿ ; ಠಾಣೆಯಲ್ಲಿ ಪ್ರಕರಣ ದಾಖಲು

ಶೇರ್ ಮಾಡಿ

ಮೆಲ್ಕಾರ್‌-ಮುಡಿಪು ರಸ್ತೆಯ ಸಜೀಪಮೂಡ ಗ್ರಾಮದ ಕಂದೂರಿನಲ್ಲಿ ಕಾಸರಗೋಡಿ ನಿಂದ ಬಿ.ಸಿ.ರೋಡಿಗೆ ಆಗಮಿಸುತ್ತಿದ್ದ ಕೆಎಸ್ಸಾರ್ಟಿಸಿ ಬಸ್ಸೊಂದು ಓವರ್‌ಟೇಕ್‌ ಭರದಲ್ಲಿದ್ದ ಗೂಡ್ಸ್‌ ರಿಕ್ಷಾವನ್ನು ರಕ್ಷಿಸುವ ಪ್ರಯತ್ನದಲ್ಲಿ ವಿದ್ಯುತ್‌ ಕಂಬಕ್ಕೆ ಢಿಕ್ಕಿ ಹೊಡೆದ ಘಟನೆ ಸೆ.22ರಂದು ರಾತ್ರಿ ನಡೆದಿದೆ.

ಗೂಡ್ಸ್‌ ರಿಕ್ಷಾ ಚಾಲಕ ಸ್ಕೂಟರೊಂದನ್ನು ಓವರ್‌ಟೇಕ್‌ ಮಾಡಿದ್ದು, ಈ ಸಂದರ್ಭದಲ್ಲಿ ಬಸ್‌ ಎದುರಿನಿಂದ ಆಗಮಿಸುತ್ತಿತ್ತು. ಬಸ್‌ ಚಾಲಕ ಗೂಡ್ಸ್‌ ರಿಕ್ಷಾಕ್ಕೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಬಸನ್ನು ಎಡಕ್ಕೆ ತಿರುಗಿಸಿದ್ದು, ಆ ವೇಳೆ ವಿದ್ಯುತ್‌ ಕಂಬಕ್ಕೆ ಢಿಕ್ಕಿಯಾಗಿದೆ.

ಘಟನೆಯಲ್ಲಿ ವಿದ್ಯುತ್‌ ಕಂಬ ತುಂಡಾಗಿದೆ. ಬಸ್ಸಿನ ಮುಂಭಾಗ ಜಖಂಗೊಂಡಿದೆ. ಬಂಟ್ವಾಳ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

error: Content is protected !!
%d