ವಿದೇಶದ ಅತಿ ದೊಡ್ಡ ಹಿಂದೂ ದೇಗುಲ ಉದ್ಘಾಟನೆಗೆ ಸಿದ್ಧ, ಎಲ್ಲಿದೆ ಈ ದೇವಸ್ಥಾನ? ಏನೆಲ್ಲಾ ವಿಶೇಷತೆಗಳಿವೆ? ಇಲ್ಲಿದೆ ವಿವರ

ಶೇರ್ ಮಾಡಿ

ಅತಿ ದೊಡ್ಡ ಹಿಂದೂ ದೇವಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಅಮೆರಿಕದ ಅಮೆರಿಕಾದ ನ್ಯೂ ಜೆರ್ಸಿಯ ಸ್ವಾಮಿ ನಾರಾಯಣ ದೇಗುಲ ಬಹುತೇಕ ಪೂರ್ಣಗೊಂಡಿದ್ದು, ಅಕ್ಟೋಬರ್ 8 ರಂದು ಉದ್ಘಾಟನೆಯಾಗಲಿದೆ.

ನ್ಯೂ ಜೆರ್ಸಿಯ ರಾಬಿನ್ಸ್‌ವಿಲ್ಲೆಯಲ್ಲಿ ಬರೋಬ್ಬರಿ 183 ಎಕರೆ ಜಾಗದಲ್ಲಿರುವ ಸ್ವಾಮಿ ನಾರಾಯಣ ದೇವಸ್ಥಾನವನ್ನು 2011ರಿಂದ 2023ರವರೆಗಿನ 12 ವರ್ಷಗಳ ಅವಧಿಯಲ್ಲಿ ಸುಮಾರು 12,500 ಸ್ವಯಂಸೇವಕರು ನಿರ್ಮಿಸಿದ್ದಾರೆ.

ಇದನ್ನು ಪ್ರಾಚೀನ ಹಿಂದೂ ಧರ್ಮಗ್ರಂಥ ಪ್ರಕಾರ ಸ್ಥಾಪಿಸಲಾಗಿದ್ದು, ದೇವಸ್ಥಾನದಲ್ಲಿ ಪ್ರತಿಮೆಗಳು, ಭಾರತೀಯ ಸಂಗೀತ ವಾದ್ಯಗಳು, ಭಾರತೀಯ ಸಂಸ್ಕ್ರತಿ ಮತ್ತು ನೃತ್ಯ ಪ್ರಕಾರದ ಕೆತ್ತನೆಗಳು ಸೇರಿದಂತೆ ಸುಮಾರು 10,000 ಕೆತ್ತನೆಗಳು ಅಥವಾ ಪ್ರತಿಮೆಗಳನ್ನು ಒಳಗೊಂಡಿದೆ.

ಈ ದೇವಾಲಯವು ಕಾಂಬೋಡಿಯಾದಲ್ಲಿರುವ ವಿಶ್ವದ ಅತಿ ದೊಡ್ಡ ಹಿಂದೂ ದೇವಾಲಯವಾದ ಪುರಾತನ ಅಂಕೋರ್‌ ವಾಟ್‌ ನಂತರದ 2ನೇ ದೊಡ್ಡ ದೇವಾಲಯವಾಗಿದೆ ಎನ್ನಲಾಗಿದೆ.

ಅಂಕೋರ್‌ವಾಟ್‌ ದೇಗುಲ 500 ಮೀ. ಪ್ರದೇಶದಲ್ಲಿದೆ. ಸ್ವಾಮಿನಾರಾಯಣ ದೇವಾಲಯವನ್ನು ಸುಣ್ಣದ ಕಲ್ಲು, ಗುಲಾಬಿ ಮರಳುಗಲ್ಲು, ಅಮೃತ ಶಿಲೆ ಮತ್ತು ಗ್ರಾನೈಟ್‌ಗಳಿಂದ ನಿರ್ಮಿಸಲಾಗಿದೆ.

ಇದು ಮುಖ್ಯ ದೇವಾಲಯದ ಹೊರತುಪಡಿಸಿ ಒಟ್ಟು 12 ಉಪ ದೇಗುಲಗಳನ್ನು ಹೊಂದಿದೆ. ಔಪಚಾರಿಕವಾಗಿ ದೇವಸ್ಥಾನ ಉದ್ಘಾಟನೆ ಯಾಗದಿದ್ದರೂ ಈಗಾಗಲೇ ಹಿಂದೂಗಳು ಸೇರಿದಂತೆ ಇತರ ಧರ್ಮೀಯರು ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಾರೆ.

Leave a Reply

error: Content is protected !!
%d