ಅಕ್ರಮ ಮರಳುಗಾರಿಕೆ ಸ್ಥಳಕ್ಕೆ ದಾಳಿ; 25.45 ಲ.ರೂ. ಮೌಲ್ಯದ ಸೊತ್ತು ವಶ

ಶೇರ್ ಮಾಡಿ

ನಗರದ ಕಣ್ಣೂರು ಬೆಂಝ್ ಶೋ ರೂಮ್‌ನ ಹಿಂಭಾಗದ ನೇತ್ರಾವತಿ ನದಿ ಕಿನಾರೆಯಿಂದ ಅಕ್ರಮವಾಗಿ ಮರಳು ತುಂಬಿಸಿ ಸಾಗಾಟ ಮಾಡುತ್ತಿದ್ದ ಸ್ಥಳಕ್ಕೆ ಮಂಗಳೂರು ಸಿಸಿಬಿ ಪೊಲೀಸರು ಸೋಮವಾರ ಮಧ್ಯರಾತ್ರಿ ಸುಮಾರಿಗೆ ದಾಳಿ ನಡೆಸಿದ್ದಾರೆ.

ದಾಳಿ ವೇಳೆ ಆರೋಪಿಗಳು ಓಡಿ ಹೋಗಿದ್ದಾರೆ. 5 ಟಿಪ್ಪರ್‌ ಲಾರಿಗಳು, ದೋಣಿ, ಮರಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತುಗಳ ಮೌಲ್ಯ 25.45 ಲ.ರೂ. ಮೌಲ್ಯ ಆಗಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

ಸಿಸಿಬಿ ಘಟಕದ ಎಎಸ್‌ಐ ಮೋಹನ್‌ ಮತ್ತು ಸಿಬಂದಿ ದಾಳಿಯಲ್ಲಿ ಪಾಲ್ಗೊಂಡಿದ್ದರು.

Leave a Reply

error: Content is protected !!
%d