
ಮಲಗಿದ್ದ ಮಗು ಮೇಲೆ ಕಲ್ಲು ಬಿದ್ದು ಸ್ಥಳದಲ್ಲೆ ಸಾವನ್ನಪ್ಪಿದ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ರಾಯಪುರ ಗ್ರಾಮದಲ್ಲಿ ನಡೆದಿದೆ. ತೇಜಸ್(4) ಮೃತ ರ್ದುದೈವಿ.
ಶಾಂತಕುಮಾರ, ಮಲ್ಲೇಶ್ವರಿ ದಂಪತಿ ಕಡಪದಿಂದ ಮನೆ ಕಟ್ಟಿಕೊಂಡಿದ್ದರು. ಮನೆ ಪಕ್ಕದಲ್ಲಿ ತೆಂಗಿನ ಮರ ಇದ್ದು, ಎಮ್ಮೆ ಮನೆ ಪಕ್ಕದ ತೆಂಗಿನ ಮರದ ನಡುವೆ ಸಿಲುಕಿದೆ. ಈ ವೇಳೆ ಎಮ್ಮೆ ಉಜ್ಜಿದ ರಭಸದ ಪರಿಣಾಮ ಕಡಪದ ಗೊಡೆ ಬಿದ್ದು ಮಗು ಸಾವನ್ನಪ್ಪಿದ ದುರ್ಘಟನೆ ನಡೆದಿದೆ.


