
ಸಂಪ್ಯಾಡಿ: ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ನೆಲ್ಯಾಡಿ, ಜೆಸಿಐ ನೆಲ್ಯಾಡಿ ಇದರ ಸಹಕಾರದೊಂದಿಗೆ ಓರ್ಥೊಡೋಕ್ಸ್ ಯೂತ್ ಮೂವ್‍ಮೆಂಟ್ ಸಂಪ್ಯಾಡಿ-ಶಿರಾಡಿ ಇವರ ಆಶ್ರಯದಲ್ಲಿ ಶ್ರೀ ಮಂಜುನಾಥೇಶ್ವರ ಮಲ್ಟಿಸ್ಪೆಷಾಲಿಟಿ ಅಸ್ಪತ್ರೆ ಉಜಿರೆ ಇವರ ಸಹಯೋಗ ದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವು ಸಂಪ್ಯಾಡಿ-ಶಿರಾಡಿ ಚರ್ಚ್ ನ ಆವರಣದಲ್ಲಿ ನಡೆಯಿತು.

ನೆಲ್ಯಾಡಿ ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಅಧ್ಯಕ್ಷರಾದ ಪಿಪಿಎಫ್ ನಾರಾಯಣ ಬಲ್ಯ ದೀಪ ಪ್ರಜ್ವಲಿಸುವ ಮೂಲಕ ಆರೋಗ್ಯ ಶಿಬಿರವನ್ನು ಉದ್ಘಾಟಿಸಿ ಸಂದರ್ಭೋಚಿತವಾಗಿ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ ರೆ|ಫಾ| ಜೋಸ್ ಚೆಮ್ಮನಂ ವಿಕಾರ್ ರವರು ಮಾತನಾಡಿ ಗ್ರಾಮೀಣ ಭಾಗದಲ್ಲಿ ಚರ್ಚಿನ ಯುವ ಜನ ಸಂಘಟನೆ ಕೈಗೊಳ್ಳುತ್ತಿರುವ ಸಮಾಜಮುಖಿ ಕಾರ್ಯಗಳನ್ನು ಮುಕ್ತ ಕಂಠದಿಂದ ಶ್ಲಾಘಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಇನ್ನೋರ್ವ ಅತಿಥಿ ನೆಲ್ಯಾಡಿ ಜೆಸಿಐ ಅಧ್ಯಕ್ಷರಾದ ದಯಾಕರ ರೈ ರವರು ಮಾತನಾಡಿ ಚರ್ಚಿನ ಸಾಮಾಜಿಕ ಜವಾಬ್ದಾರಿಯನ್ನು ಪ್ರಶಂಸಿಸಿದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆಯ ಚಿದಾನಂದ ರವರು ಮಾತನಾಡಿ ಆಸ್ಪತ್ರೆಯಿಂದ ಸಿಗುವಂತಹ ಹಲವಾರು ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಚರ್ಚಿನ ಕಾರ್ಯದರ್ಶಿ ಅನಿಲ್ ಟಿ. ಯು, ಖಜಾಂಚಿ ಪ್ರಕಾಶ್ ಸಿ.ಜೆ., ಒಸಿವೈಎಂ ನ ಕಾರ್ಯದರ್ಶಿ ಶೈಲೇಶ್ ಕೆ.ಎ , ಖಜಾಂಚಿ ಶೈಜು ಟಿ.ಯು ಉಪಸ್ಥಿತರಿದ್ದರು.
ಸುಮಾರು 200ಕ್ಕೂ ಮಿಕ್ಕಿ ಜನರು ಉಚಿತ ಆರೋಗ್ಯ ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು
ಸಂಡೆ ಸ್ಕೂಲ್ ವಿಧ್ಯಾರ್ಥಿಗಳು ಪ್ರಾರ್ಥಿಸಿದರು, ನೂಜಿಬಾಳ್ತಿಲ ಬೆಥನಿ ಪದವಿ ಪೂರ್ವ ಕಾಲೇಜು ನ ಪ್ರಾಂಶುಪಾಲರಾದ ಜಾರ್ಜ್ ಟಿ.ಎಸ್ ನಿರೂಪಿಸಿದರು, ನೆಲ್ಯಾಡಿ ಸೈಂಟ್ ಜಾರ್ಜ್ ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾದ ಮಧು ಎ.ಜೆ ವಂದಿಸಿದರು.

