ಸುಮಾರು 12 ಅಡಿ ಉದ್ದದ ಕಾಳಿಂಗ ಸರ್ಪ ಪ್ರತ್ಯಕ್ಷ ; ಹಿಡಿದು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಿದ ಸ್ನೇಕ್ ಕಿರಣ್

ಶೇರ್ ಮಾಡಿ

ಕಳೆದ ಎರಡು ತಿಂಗಳಿನಿಂದ ಪಂಜಿಕಲ್ಲು ಪರಿಸರದಲ್ಲಿ ಭೀತಿ ಹುಟ್ಟಿಸಿದ್ದ ಕಾಳಿಂಗ ಸರ್ಪವನ್ನು ಕೊನೆಗೂ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಿದ ಬಗ್ಗೆ ವರದಿಯಾಗಿದೆ.

ಬಂಟ್ವಾಳ ತಾಲೂಕಿನ ಪಂಜಿಕಲ್ ಪ್ರದೇಶದಲ್ಲಿ ಅಲ್ಲಲ್ಲಿ ಭೀತಿ ಹುಟ್ಟಿಸುತ್ತಿದ್ದ ಕಾಳಿಂಗ ಸರ್ಪವನ್ನು ಇಂದು ಸ್ನೇಕ್ ಕಿರಣ್ ಅವರು ಹಿಡಿದು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಿದ್ದಾರೆ.

ಪಂಜಿಕಲ್ಲು ಗ್ರಾಮದ ಇನಿಲಕೋಡಿ ನಾರಾಯಣ ಬಂಗೇರ ಇವರ ಮನೆಯ ಅಂಗಳದಲ್ಲಿ ಸುಮಾರು 12 ಇಂಚು ಉದ್ದದ ಕಾಳಿಂಗ ಸರ್ಪ ಪ್ರತ್ಯಕ್ಷವಾಗಿತ್ತು. ರೋಹಿಣಿ ಎಂಬವರು ತೋಟಕ್ಕೆ ಹೋಗಿ ವಾಪಾಸು ಮನೆಗೆ ಬರುವ ಸಂದರ್ಭದಲ್ಲಿ ಇವರಿಗೆ ಗೊತ್ತಿಲ್ಲದಂತೆ ಕಾಳಿಂಗ ಸರ್ಪಕ್ಕೆ ತುಳಿದಿದ್ದರು. ಆದರೆ ಕ್ಷಣಾರ್ಧದಲ್ಲಿ ಗಮನಕ್ಕೆ ಬಂದು ಅಪಾಯದಿಂದ ಪಾರಾಗಿ

ಕೂಡಲೇ ಮನೆಯವರು ಸ್ನೇಕ್ ಕಿರಣ್ ಅವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಕಿರಣ್ ಅವರು ಕಾಳಿಂಗ ಸರ್ಪವನ್ನು ರಕ್ಷಣೆ ಮಾಡಿದ್ದಾರೆ. ಬಳಿಕ ಅರಣ್ಯ ಇಲಾಖೆಯ ಸಹಕಾರದಿಂದ ಕಾಳಿಂಗ ಸರ್ಪವನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು ಕಾರ್ಯಾಚರಣೆಯಲ್ಲಿ ಸಿರಿಲ್ ಆಚಾರಿಪಾಲಿಕೆ, ಧೀರಜ್ ನಾವುರ,ಅರಣ್ಯ ಸಿಬ್ಬಂದಿ ಸ್ಮಿತಾ ಹಾಗೂ ಜಯರಾಮ್ ಸಹಕರಿಸಿದ್ದಾರೆ.

Leave a Reply

error: Content is protected !!
%d