ಕೇವಲ 45,000 ರೂಪಾಯಿಯಲ್ಲಿ ರೋಲ್ಸ್ ರಾಯ್ಸ್ ಕಾರು ನಿರ್ಮಿಸಿದ ಕೇರಳದ ಯುವಕ ..!!

ಶೇರ್ ಮಾಡಿ

ಅತ್ಯಂತ ದುಬಾರಿ ಕಾರುಗಳಲ್ಲಿ ರೋಲ್ಸ್ ರಾಯ್ಸ್ ಕಾರುಗಳು ಕೂಡಾ ಒಂದು, ಇದು ಪ್ರಪಂಚದ ಅತ್ಯಂತ ಶ್ರೀಮಂತರು ಮಾತ್ರ ಬಳಸುವ ಕಾರುಗಳಾಗಿವೆ. ಕೋಟಿಗಟ್ಟಲೆ ಬೆಲೆಬಾಳುವ ಕಾರುಗಳನ್ನು ಸಾಮಾನ್ಯ ಜನರು ಖರೀದಿಸುವುದು ಸಾಮಾನ್ಯದ ಮಾತು! ಆದರೆ ಕೇರಳದ ಯುವಕನೊಬ್ಬ ಇದೆ ಮಾದರಿಯ ಕಾರನ್ನು ಬರೇ 45,000 ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದಾನೆ.

ಬನ್ನಿ ಹಾಗಾದರೆ ಈ ಕಾರನ್ನು ತಯಾರಿಸಿದ ಯುವಕ ಯಾರು ಇಷ್ಟು ಕಡಿಮೆ ಖರ್ಚಿನಲ್ಲಿ ಹೇಗೆ ಕಾರನ್ನು ತಯಾರಿಸಿದ್ದಾನೆ ನೋಡೋಣ.

ಆದುನಿಕ ಯುಗದಲ್ಲಿ ಯುವಕರು ಹೊಸ ಹೊಸ ವಿಚಾರಗಳ ಬಗ್ಗೆ ಅನ್ವೇಷಣೆ ಮಾಡುವುದರಲ್ಲಿ ಹೆಚ್ಚಿನ ಉತ್ಸಾಹ ಹೊಂದಿದ್ದಾರೆ ಅದರಲ್ಲೂ ಕೈಯಲ್ಲಿ ಮೊಬೈಲ್ ಇದ್ದರೆ ಸಾಕು ಹೊಸ ಹೊಸ ಆವಿಷ್ಕಾರಗಳಿಗೆ ಈ ಮೊಬೈಲ್ ಸಹಕಾರಿಯಾಗಿದೆ ಎಂದು ಹೇಳಬಹುದು. ಅದರಂತೆ ಕೇರಳದ ಯುವಕನೊಬ್ಬ ಮಾರುತಿ 800 ಕಾರನ್ನು ಬಳಸಿ ಕೇವಲ 45,000 ಖರ್ಚು ಮಾಡಿ ಕೋಟಿಗಟ್ಟಲೆ ಬೆಲೆಬಾಳುವ ರೋಲ್ಸ್ ರಾಯ್ಸ್ ಕಾರಿನ ಮಾದರಿಯನ್ನೇ ನಿರ್ಮಾಣ ಮಾಡಿದ್ದಾನೆ, ಅಲ್ಲದೆ ಯುವಕನ ಈ ಸಾಹಸಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಕೇರಳದ ಯುವಕ ತನ್ನ ಮನೆಯಲ್ಲೇ ಈ ಕಾರನ್ನು ತಯಾರಿಸಿದ್ದು ಅದಕ್ಕೆ ಬೇಕಾದ ವಸ್ತುಗಳನ್ನು ತಾನೇ ಸಿದ್ದ ಪಡಿಸಿದ್ದು ಕೆಲವೊಂದನ್ನು ಅಟೋಮೊಬೈಲ್ ಅಂಗಡಿಗಳಲ್ಲಿ ಬಿಡಿಭಾಗಗಳನ್ನು ಪಡೆದುಕೊಂಡು ಅತ್ಯಾಕರ್ಷಕವಾಗಿ ಕಾರನ್ನು ವಿನ್ಯಾಸಗೊಳಿಸಿದ್ದಾನೆ.

ಹೊರಭಾಗದಲ್ಲಿ ನೋಡುವಾಗ ರೋಲ್ಸ್ ರಾಯ್ಸ್ ಕಾರಿನಂತೆ ಕಾಣುವಂತೆ ವಿನ್ಯಾಸಗೊಳಿಸಿದ ಯುವಕ ಅದಕ್ಕೆ ಸೂಕ್ತವಾದ ಹೆಡ್ ಲೈಟ್, ಲೋಗೋ ನಿರ್ಮಾಣ ಮಾಡಿದ್ದಾನೆ. ಮಕ್ಕಳ ಆಟಿಕೆ ಸಾಮಗ್ರಿಯಲ್ಲಿ ಸಿಗುವ ರೋಲ್ಸ್ ರಾಯ್ಸ್ ಲೋಗೋವನ್ನು ಇದಕ್ಕೆ ಬಳಸಲಾಗಿದ್ದು ಹೊರಗಿನ ಭಾಗಕ್ಕೆ ಸ್ಟೀಲ್ ಶೀಟ್ ಗಳನ್ನು ಬಳಸಲಾಗಿದೆ. ಅದರಂತೆ ಕಾರಿನ ಒಳ ಭಾಗವನ್ನು ಬಿ ಎಂ ಡಬ್ಲ್ಯೂ ಮಾದರಿಯಲ್ಲಿ ವಿನ್ಯಾಸಗೊಳಿಸಲಾಯಿದ್ದು ಅತ್ಯಾಕರ್ಷಕವಾಗಿದೆ.

ಕೇರಳದ ಹತೀಫ್ ಈ ಕಾರಿನ ಸೃಷ್ಟಿಕರ್ತ. ಅಂದಹಾಗೆ ಹತೀಫ್ ಅವರು ಈ ರೀತಿಯ ವಿಶಿಷ್ಟ ಕಾರುಗಳನ್ನು ರಚಿಸಿದ್ದು ಇದೇ ಮೊದಲಲ್ಲ. ಈ ಹಿಂದೆಯೂ ಅವರು ಅಂತಹ ಹಲವಾರು ಕಾರುಗಳನ್ನು ವಿನ್ಯಾಸಗೊಳಿಸಿದ್ದಾರೆ. ಇತ್ತೀಚೆಗಂತೂ ಅವರು ಮೋಟಾರ್ ಸೈಕಲ್ ಇಂಜಿನ್ ಇರುವ ಜೀಪ್ ಕಂಪನಿ ಕಾರನ್ನು ಸಿದ್ಧಪಡಿಸಿದ್ದರು ಇದಕ್ಕೆ ತುಂಬಾ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Leave a Reply

error: Content is protected !!