ನೆಲ್ಯಾಡಿ: ತಾಯಿ ಮತ್ತು ಮಗು ನಾಪತ್ತೆ

ಶೇರ್ ಮಾಡಿ

ತಾಯಿ ಮತ್ತು ಮಗು ಮೂರು ದಿನಗಳಿಂದ ನಾಪತ್ತೆಯಾಗಿರುವ ಘಟನೆ ಕಡಬ ತಾಲೂಕಿನ ನೆಲ್ಯಾಡಿ ಗ್ರಾಮದ ಕರಂದಾಲ ಕೊಪ್ಪದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಇಲ್ಲಿನ ನಾಗೇಶ್ ಎಂಬವರ ಪತ್ನಿ ಶಾರದ(37) ಸೆ.30ರಂದು ಬಟ್ಟೆ ಹೊಲಿಯಲು ಕೊಡಲೆಂದು ನೆಲ್ಯಾಡಿ ಪೇಟೆಗೆ ಹೋಗಿ ಬರುತ್ತೇನೆಂದು ಹೇಳಿ ಹೋಗಿದ್ದು ಜೊತೆಗೆ ತಮ್ಮ ಮಗ ವಚನ್(6)ನನ್ನು ಕೂಡ ಕರೆದುಕೊಂಡು ಹೋಗಿದ್ದರು.

ಆದರೆ ಮರಳಿ ಬರಲೇ ಇಲ್ಲ ಎಂದು ಪತಿ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಶಾರದಾ ಅವರು ಈ ಹಿಂದೆಯೂ ಮಕ್ಕಳನ್ನು ಕರೆದುಕೊಂಡು ಹೋದರೆ ಎರಡು ಮೂರು ದಿನ ಆದರೂ ಹಿಂತಿರುಗಿ ಬರುತ್ತಿರಲಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ ಸರಿಯಾಗಿ ಉತ್ತರಿಸುತ್ತಿರಲಿಲ್ಲ ಎಂದು ಹೇಳಲಾಗುತ್ತಿದೆ.

Leave a Reply

error: Content is protected !!
%d