ಪಿಕಪ್ ಪಲ್ಟಿ; ಚಾಲಕ ಪಾರು

ಶೇರ್ ಮಾಡಿ

ಬಾಳೆಹಣ್ಣು ಸಾಗಾಟದ ಪಿಕಪ್ ವಾಹನ ಪಲ್ಟಿ ಹೊಡೆದು ರಸ್ತೆ ಬದಿಯ ಚರಂಡಿಯ ಮೇಲೆ ನಿಂತ ಘಟನೆ ಬೆಂಗಳೂರು – ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಾಣಿ ಸಮೀಪದ ಸೂರಿಕುಮೇರಿನಲ್ಲಿ ಬುಧವಾರ ಮುಂಜಾನೆ ನಡೆದಿದೆ.

ಸೂರಿಕುಮೇರ್ ಬದ್ರಿಯಾ ಜುಮಾ ಮಸೀದಿ ಮುಂಭಾಗದ ರಾಷ್ಟ್ರೀಯ ಹೆದ್ದಾರಿಯ ಹೊಸ ರಸ್ತೆಯಲ್ಲಿ ತಮಿಳುನಾಡು ನೋಂದಾಯಿತ ಬಾಳೆಹಣ್ಣು ಸಾಗಾಟದ ಪಿಕಪ್ ವಾಹನವು ಪಲ್ಟಿ ಹೊಡೆದು ರಸ್ತೆ ಬದಿಯ ಚರಂಡಿಯೊಳಗೆ ನಿಂತಿದೆ, ನಿದ್ದೆಯ ಮಂಪರಿನಲ್ಲಿ ಬೆಳಗ್ಗಿನ ಜಾವ ಅಪಘಾತ ಸಂಭವಿಸಿದ್ದು ಚಾಲಕ ಸಣ್ಣ ಪುಟ್ಟ ಗಾಯದೊಂದಿಗೆ ಪಾರಾಗಿದ್ದಾನೆ.

Leave a Reply

error: Content is protected !!