ನಕ್ಷತ್ರಗಳಿಗೆ ತಮ್ಮ ನೆಚ್ಚಿನ ತಾರೆಯರು ಹೆಸರು ಇಡುವುದು ಇತ್ತೀಚೆಗೆ ಟ್ರೆಂಡ್ ಆಗಿದೆ. ಕನ್ನಡದಲ್ಲಿ ಇದನ್ನು ಮೊದಲು ಶುರು ಮಾಡಿದ್ದು ಪುನೀತ್ ರಾಜ್ ಕುಮಾರ್ ಅಭಿಮಾನಿಗಳು. ಪುನೀತ್ ಅಗಲಿದಾಗ ನಕ್ಷತ್ರವೊಂದಕ್ಕೆ ಪುನೀತ್ ಅವರ ಹೆಸರು ಇಡಲಾಗಿತ್ತು. ಇತ್ತೀಚೆಗಷ್ಟೇ ಕಿಚ್ಚ ಸುದೀಪ್ ಅವರ ಹುಟ್ಟು ಹಬ್ಬದಂದು ಹರೀಶ್ ಅರಸು ಅವರು ಸುದೀಪ್ ಅವರ ಹೆಸರನ್ನು ನಕ್ಷತ್ರವೊಂದಕ್ಕೆ ಇಟ್ಟಿದ್ದರು. ಇದೀಗ ಕಿರುತೆರೆ ನಟಿ ಸಾನ್ಯಾ ಅಯ್ಯರ್ ಅಭಿಮಾನಿಗಳು ನಟಿಯ ಹೆಸರಿನ್ನು ನಕ್ಷತ್ರವೊಂದಕ್ಕೆ ಇಟ್ಟಿದ್ದಾರೆ.
ಸಾನ್ಯಾ ಅಯ್ಯರ್ ಹುಟ್ಟು ಹಬ್ಬದಂದು ಅಭಿಮಾನಿಗಳು ಈ ಕೆಲಸ ಮಾಡಿದ್ದು, ಆ ವಿಡಿಯೋವನ್ನು ಸ್ವತಃ ಸಾನ್ಯಾ ಅಯ್ಯರ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನಕ್ಷತ್ರಗಳಿಗೆ ಹೆಸರು ಇಡುವುದು ನನಗೆ ಗೊತ್ತೇ ಇರಲಿಲ್ಲ. ಇದೇ ಮೊದಲ ಬಾರಿಗೆ ನನಗೆ ಗೊತ್ತಾಗಿದ್ದು ಎಂದು ಅಚ್ಚರಿಯನ್ನು ವ್ಯಕ್ತ ಪಡಿಸಿದ್ದಾರೆ. ಅಲ್ಲದೇ ಇಂಥದ್ದೊಂದು ಕೆಲಸ ಮಾಡಿದ ಅಭಿಮಾನಿಗಳಿಗೆ ಧನ್ಯವಾದಗಳನ್ನೂ ಅವರು ಹೇಳಿದ್ದಾರೆ.