ಸುಳ್ಯ ಶಾಸಕರಿಂದ ಆನೆ ಹಾವಳಿಗೆ ಸೂಕ್ತ ಪರಿಹಾರ ಕಲ್ಪಿಸುವ ಕುರಿತು ಸಚಿವರಿಗೆ ಮನವಿ

ಶೇರ್ ಮಾಡಿ

ಕಡಬ ತಾಲೂಕಿನ ಐತೂರು, ಕೊಣಾಜೆ, ಕೊಂಬಾರು, ಮತ್ತು ಸುಬ್ರಹ್ಮಣ್ಯ ಹಾಗೂ ಸುತ್ತಮುತ್ತಲಿನ ಇನ್ನಿತರ ಗ್ರಾಮಗಳಲ್ಲಿ ಕಾಡಾನೆ ಹಾವಳಿಯಿಂದ ಸಮಸ್ಯೆ ಉಂಟಾಗಿದ್ದು ಆದ್ದರಿಂದ ಸದರಿ ಆನೆಗಳನ್ನು ಆನೆ ಶಿಬಿರಗಳಿಗೆ ಸ್ಥಳಾಂತರಿಸಬೇಕಾಗಿ ಮತ್ತು ಹಾನಿಯನ್ನು ತಪ್ಪಿಸಲು ಆನೆ ಕಂದಕ, ಸೋಲಾರ್ ಬೇಲಿ ಮತ್ತು ಸೋಲಾರ್ ಬೀದಿ ದೀಪ ಸಂರಕ್ಷಣಾ ಕ್ರಮ ಕೈಗೊಳ್ಳಬೇಕು ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ರವರು ಮಾನ್ಯ ಅರಣ್ಯ, ಜೀವಿ ಪರಿಸ್ಥಿತಿ ಹಾಗೂ ಪರಿಸರ ಸಚಿವರಾದ ಈಶ್ವರ ಖಂಡ್ರೆ ಅವರನ್ನು ಬೆಂಗಳೂರು ವಿಕಾಸ ಸೌಧ ಕಛೇರಿಯಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದರು.

ನಂತರ ಸಚಿವರು ಪರಿಶೀಲಿಸಿ ಸೂಕ್ತ ಕ್ರಮ ಕೈಕೊಳ್ಳಲಾಗುವುದು ಎಂದು ತಿಳಿಸಿದರು.

Leave a Reply

error: Content is protected !!
%d