ಲೈಂಗಿಕ ಕಿರುಕುಳ ಆರೋಪ: ಬಿಗ್‌ಬಾಸ್‌ ಸ್ಪರ್ಧಿ ಬಂಧನ

ಶೇರ್ ಮಾಡಿ

ವಿವಾಹವಾಗುವುದಾಗಿ ನಂಬಿಸಿ ಯುವತಿಯೋರ್ವಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನಲೆಯಲ್ಲಿ ಮಲಯಾಳಂ ನಟ, ಮಲಯಾಳಂ ಬಿಗ್‌ಬಾಸ್‌ ಸ್ಪರ್ಧಿ ಶಿಯಾಸ್‌ ಕರೀಂನನ್ನು ಕಾಸರಗೋಡಿನ ಚಂದೇರ ಠಾಣಾ ಪೋಲೀಸರು ಬಂಧಿಸಿದ್ದಾರೆ.

ಕಾಸರಗೋಡು ಮೂಲದ ಯುವತಿ ನೀಡಿದ ದೂರಿನನ್ವಯ ಶಿಯಾಸ್‌ ವಿರುದ್ಧ ಲುಕ್‌ಔಟ್‌ ನೋಟಿಸ್‌ ಬಿಡುಗಡೆಗೊಳಿಸಲಾಗಿತ್ತು. ವಿದೇಶದಿಂದ ಬಂದಿಳಿದ ಶಿಯಾಸ್‌ನನ್ನು ಕಾಸರಗೋಡು ಪೊಲೀಸರು ಚೆನ್ನೈ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.

ಅನೇಕ ಮಲಯಾಳಂ ಸಿನೆಮಾಗಳಲ್ಲಿ ನಟಿಸಿದ್ದ ಶಿಯಾಸ್‌ ಕರೀಂ ಬಿಗ್‌ಬಾಸ್‌, ಸ್ಟಾರ್‌ ಮ್ಯಾಜಿಕ್‌ ನಂತಹ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದರು.

ಶಿಯಾಸ್‌ಗೆ ಎರ್ನಾಕುಲಂನ ಜಿಮ್‌ ಒಂದರಲ್ಲಿ ಕಾಸರಗೋಡು ಮೂಲದ ಪಡನ್ನದ 32 ವರ್ಷದ ಯುವತಿಯ ಪರಿಚಯವಾಗಿತ್ತು. ಆ ಬಳಿಕ ಆಕೆಯ ಜೊತೆ ಸಲುಗೆ ಬೆಳೆಸಿ ವಿವಾಹವಾಗುವ ಭರವಸೆ ನೀಡಿ ಹಲವಾರು ಕಡೆಗೆ ಆಕೆಯನ್ನು ಕರೆದೊಯ್ದು ಅತ್ಯಾಚಾರ ಎಸಗಿದ್ದ ಎಂದು ದೂರುದಾರ ಯುವತಿ ಆರೋಪಿಸಿದ್ದಾಳೆ.

ಈ ನಡುವೆ ಶಿಯಾಸ್‌ ತನ್ನಿಂದ 11 ಲಕ್ಷ ರೂ. ಪಡೆದು ವಂಚಿಸಿದ್ಧಾಗಿಯೂ ದೂರಿನಲ್ಲಿ ತಿಳಿಸಲಾಗಿದೆ. 2021 ರಿಂದ 2023ರ ತನಕ ಎರ್ನಾಕುಲಂ, ಮುನ್ನಾರ್‌ ಮುಂತಾದೆಡೆ ರೆಸಾರ್ಟ್‌ಗಳಿಗೆ ಕರೆದೊಯ್ದು ಕಿರುಕುಳ ನೀಡಿರುವುದಾಗಿ ಆರೋಪಿಸಲಾಗಿದೆ. ಸಂತ್ರಸ್ಥ ಯುವತಿಯನ್ನು ಮದುವೆಯಾಗುವುದಾಗಿ ತಿಳಿಸಿದ್ದ ಶಿಯಾಸ್‌ ಈ ನಡುವೆ ಬೇರೆ ಯುವತಿಯೊಂದಿಗೆ ವಿವಾಹ ನಿಶ್ಚಯ ಮಾಡಿಕೊಂಡಿರುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಪಡಿಸಿದ್ದ. ಹೀಗಾಗಿ ಶಿಯಾಸ್‌ ವಿವಾಹ ಭರವಸೆ ನೀಡಿ ತನ್ನನ್ನು ವಂಚಿಸಿದ್ದಾನೆ ಎಂದು ಯುವತಿ ದೂರು ನೀಡಿದ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Leave a Reply

error: Content is protected !!