‘ರೂ.2 ಲಕ್ಷಕ್ಕೆ ಅಪ್ಪ ಮಾರಾಟಕ್ಕಿದ್ದಾನೆ’ 8 ವರ್ಷದ ಮಗಳು ಬರೆದ ಸೇಲ್ ನೋಟ್​ ವೈರಲ್

ಶೇರ್ ಮಾಡಿ

ಈ ವಿಚಿತ್ರ ಪೋಸ್ಟ್​ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. 8 ವರ್ಷದ ಬಾಲಕಿ ಹೀಗೆ ತನ್ನ ಅಪ್ಪನಿಗೆ ಹೇಳಲು ಸಾಧ್ಯವೆ? ಅಷ್ಟಕ್ಕೂ ಅವಳಿಗೆ ಅಪ್ಪನನ್ನು ಮಾರುವಂಥ ಐಡಿಯಾ ಬಂದಿದ್ದಾದರೂ ಹೇಗೆ? ಮತ್ತೆ ಅಪ್ಪನ ಮೇಲೆ ಈ ಪರಿ ಕೋಪ ಬರಲು ಕಾರಣವೇನು? ಅಂತೆಲ್ಲ ನೆಟ್ಟಿಗರು ಚರ್ಚಿಸುತ್ತಿದ್ದಾರೆ. ಅನೇಕರು ಈ ಪೋಸ್ಟ್ ಅನ್ನು ವಿನೋದದಿಂದ ನೋಡಿದ್ದಾರೆ. ನಿಮಗೆ ಅವಳು ತುಂಬಾ ಪ್ರಾಮುಖ್ಯತೆಯನ್ನು ಕೊಟ್ಟಿದ್ಧಾಳೆ, ಅದಕ್ಕೇ ಅವಳಿಗೆ ನಿಮ್ಮ ಮೇಲೆ ಕೋಪ ಬಂದಿದೆ ಎಂದು ಅನೇಕರು ತಂದೆಯನ್ನು ಉದ್ದೇಶಿಸಿ ಹೇಳಿದ್ದಾರೆ. ಹಾಗಿದ್ದರೆ ವಿಷಯವೇನು?

‘ರೂ.2 ಲಕ್ಷಕ್ಕೆ ಅಪ್ಪ ಮಾರಾಟಕ್ಕಿದ್ದಾನೆ’ ಎಂದು ಮನೆ ಬಾಗಿಲಿಗೆ ಸೇಲ್​ ನೋಟ್ ಅಂಟಿಸಿದ್ದಾಳೆ 8 ವರ್ಷದ ಮಗಳು. ಯಾವುದೋ ಒಂದು ಸಣ್ಣ ವಿಷಯಕ್ಕೆ ಆಕೆ ಭಯಂಕರ ಕೋಪಗೊಂಡಿದ್ದಾಳೆ. ಆ ಕೋಪವನ್ನು ಆಕೆ ಸಾಮಾಜಿಕ ಜಾಲತಾಣದಲ್ಲಿ ಹೀಗೆ ಪೋಸ್ಟ್ ಹಾಕುವ ಮೂಲಕ ತೀರಿಸಿಕೊಂಡಿದ್ದಾಳೆ. ಇದು ತಮಾಷೆಗಾಗಿ ಎಂದು ಅಪ್ಪ ಸಮಜಾಯಿಷಿನ್ನೂ ಕೊಟ್ಟಿದ್ದಾನೆ.

ಅಪ್ಪನನ್ನು ಮಾರುವ ಕುರಿತು ಮಗಳು ಹಾಕಿದ ಸೇಲ್ ನೋಟ್​

X ನಲ್ಲಿ @Malavtweets ಎಂಬ ಖಾತೆದಾರರು ಈ ಪೋಸ್ಟ್​ ಮಾಡಿದ್ದಾರೆ. ತನ್ನ ಮತ್ತು ಅಪ್ಪನ ಮಧ್ಯೆ ಉಂಟಾದ ಸಣ್ಣ ಭಿನ್ನಾಭಿಪ್ರಾಯದಿಂದಾಗಿ ಈ ಬಾಲಕಿ ಹೀಗೆ ಅಪಾರ್ಟ್ಮೆಂಟ್​ನ ಬಾಗಿಲಿಗೆ ಸೇಲ್​ ನೋಟ್​ ತೂಗು ಹಾಕಿದ್ದಾಳೆ. ಈ ಪೋಸ್ಟ್​ ಅನ್ನು ಈತನಕ ಸುಮಾರು 30,000ಕ್ಕೂ ಹೆಚ್ಚು ಜನರು ನೋಡಿದ್ದಾರೆ. ನೂರಾರು ಜನರು ಪ್ರತಿಕ್ರಿಯಿಸಿದ್ದಾರೆ. ಈ ಪೋಸ್ಟ್​ ತುಂಬಾ ಮುದ್ದಾಗಿದೆ. ಈಕೆ ಟಿವಿ ಟೈಮ್​, ಚಾಕೋಲೇಟ್, ಪಿಕ್ನಿಕ್​, ರೌಂಡ್​, ಸಿನೆಮಾ, ಬಟ್ಟೆಬರೆ ಏನನ್ನೂ ಕೇಳದೆ ಹೀಗೆ ಇಷ್ಟೊಂದು ವ್ಯಾವಹಾರಿಕವಾಗಿ ಮಾತನಾಡಿದ್ದಾಳೆಂದರೆ! ನಾನಂತೂ ಬಿದ್ದುಬಿದ್ದು ನಗುತ್ತಿದ್ದೇನೆ ಎಂದಿದ್ದಾರೆ ಅನೇಕರು.

Leave a Reply

error: Content is protected !!
%d