ಕಬಡ್ಡಿ ಅಂಗಳದಲ್ಲಿ ತಂಡಗಳ ನಡುವೆ ಮಾರಾಮರಿ; ಕುರ್ಚಿಗಳು ಪುಡಿ ಪುಡಿ

ಶೇರ್ ಮಾಡಿ

ಎರಡು ಕಬಡ್ಡಿ ತಂಡಗಳ ಆಟಗಾರ ನಡುವೆ ಮಾರಾಮಾರಿ ನಡೆದಿರುವ ಘಟನೆಯ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಕಾನ್ಪುರದಲ್ಲಿ ಶನಿವಾರ(ಅ.7 ರಂದು) ನಡೆದ ವಾರ್ಷಿಕ ಕ್ರೀಡಾಕೂಟದಲ್ಲಿ ಈ ಘಟನೆ ನಡೆದಿದೆ.

ಕಬಡ್ಡಿ ಪಂದ್ಯ ನಡೆಯುತ್ತಿದ್ದ ಗ್ರೌಂಡ್‌ ನಲ್ಲಿ ಎರಡು ತಂಡಗಳು ಹೊಡೆದಾಡಿಕೊಂಡಿದೆ. ಆಟಗಾರರು ಪರಸ್ಪರ ಹಲ್ಲೆ ನಡೆಸಿದ್ದು, ಮೈದಾನದಲ್ಲಿದ್ದ ಕುರ್ಚಿಗಳನ್ನು ಪುಡಿಗೈದಿದ್ದಾರೆ. ಎರಡೂ ತಂಡಗಳ ಆಟಗಾರರು ಒಬ್ಬರನ್ನೊಬ್ಬರು ಒದೆಯುವುದು, ಕೆಲವರು ಪರಸ್ಪರ ಕುರ್ಚಿಗಳನ್ನು ಎಸೆಯುವುದನ್ನು ವೀಡಿಯೊದಲ್ಲಿ ಕಾಣಬಹುದು.

ವರದಿಯ ಪ್ರಕಾರ, ಎರಡೂ ತಂಡಗಳು ಕಾನ್ಪುರದ ಹೊರಗಿನ ತಂಡವಾಗಿದ್ದು, ಎರಡೂ ತಂಡಗಳು ಸ್ಪರ್ಧೆಯಿಂದ ಅನರ್ಹಗೊಂಡಿವೆ.

ಯಾಕೆ ಈ ಮಾರಾಮಾರಿ ನಡೆದಿದೆ ಎನ್ನುವ ಕಾರಣ ತಿಳಿದು ಬಂದಿಲ್ಲ. ಐಐಟಿ ಕಾನ್ಪುರ ಈ ಬಗ್ಗೆ ಇನ್ನಷ್ಟೇ ಮಾಹಿತಿ ನೀಡಬೇಕಿದೆ.

Leave a Reply

error: Content is protected !!
%d