ಅನಿತಾ ಬೀಡಿ ಉದ್ಯಮಿ ಮನೆಗೆ ವಾಣಿಜ್ಯ ತೆರಿಗೆ ಅಧಿಕಾರಿಗಳ ದಾಳಿ

ಶೇರ್ ಮಾಡಿ

ಪುತ್ತೂರು(ಪೆರ್ನೆ): ಮಾಣಿ ಉಪ್ಪಿನಂಗಡಿ ರಾಷ್ಟ್ರೀಯ ಹೆದ್ದಾರಿಯ ಪೆರ್ನೆ ಕಡಂಬು ನಿವಾಸಿಯಾಗಿರುವ ಅನಿತಾ ಬೀಡಿ ಉದ್ಯಮಿ ಇಸ್ಮಾಯಿಲ್‌ ಹಾಜಿ ಅವರ ಮನೆಗೆ ಇಂದು ಬೆಳ್ಳಂಬೆಳಗ್ಗೆ ವಾಣಿಜ್ಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಇಸ್ಮಾಯಿಲ್‌ ಹಾಜಿಯವರ ಮಕ್ಕಳಾದ ಮಹಮ್ಮದ್‌ ಆಲಿ, ಯೂಸೂಫ್‌, ಮುಸ್ತಫಾ ಮತ್ತು ಝಕಾರಿಯಾ ಬೀಡಿ ಉದ್ಯಮವಲ್ಲದೇ ದಿನಸಿ ಅಂಗಡಿ ಮತ್ತು ಬೇಕರಿ ಅಂಗಡಿಯನ್ನು ನಡೆಸುತ್ತಿದ್ದಾರೆ.

ಹಲವು ವಾಹನಗಳಲ್ಲಿ ಬಂದ ವಾಣಿಜ್ಯ ತೆರಿಗೆ ಅಧಿಕಾರಿಗಳು ಮನೆಯಲ್ಲಿ ದಾಖಲೆಗಳಿಗಾಗಿ ತಪಾಸಣೆ ನಡೆಸುತ್ತಿದ್ದು ಇದುವರೆಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

Leave a Reply

error: Content is protected !!
%d