ಪೆರಿಂಜೆ : ಸಮರ್ಥ ನಾಯಕರಾಗುವುದು ಇಂದು ಸವಾಲಿನ ವಿಷಯವಾಗಿದೆ. ನಾಯಕರು ತಮ್ಮ ಸ್ವಂತ ಬಲದಿಂದ ಗುರುತಿಸಿಕೊಳ್ಳಬೇಕು. ಅವಕಾಶವು ನಮ್ಮನ್ನು ಹುಡುಕಿಕೊಂಡು ಬರುವುದಿಲ್ಲ. ನಾವೇ ಸಿಕ್ಕಿದ ಅವಕಾಶ ಬಳಸಿಕೊಂಡು ನಾಯಕರಾಗಬೇಕು ಎಂದು ಹೊಸಂಗಡಿ ಗ್ರಾಮ ಪಂಚಾಯತ್ ಇದರ ಮಾಜಿ ಸದಸ್ಯರಾದ ಅಕ್ಬರ್ ಆಲಿ ಹೇಳಿದರು.
ಇವರು ಪೆರಿಂಜೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ ಜರುಗುತ್ತಿರುವ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದಲ್ಲಿ ನಡೆದ ನೀವು ನಾಯಕರಾಗಬೇಕೆ ಎನ್ನುವ ವಿಶೇಷ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ದಿವ್ಯಾಕುಮಾರಿ ಹಾಗೂ ಕನ್ನಡ ಭಾಷಾ ಉಪನ್ಯಾಸಕ ಮಹಾವೀರ ಜೈನ್ ಅವರು ‘ನೀವು ನಾಯಕರಾಗಬೇಕೆ’ ಎನ್ನುವ ವಿಶೇಷ ತರಬೇತಿ ಕಾರ್ಯಕ್ರಮ ನಡೆಸಿದರು.
ರಾ.ಸೇ ಯೋಜನೆಯ ಯೋಜನಾಧಿಕಾರಿ ಡಾ.ಪ್ರಸನ್ನಕುಮಾರ ಐತಾಳ್ ಹಾಗೂ ಸಹ ಯೋಜನಾಧಿಕಾರಿ ಪದ್ಮಶ್ರೀ ರಕ್ಷಿತ್ ಉಪಸ್ಥಿತರಿದ್ದರು.
ಸ್ವಯಂ ಸೇವಕ ನಿರಂತಸಾಗರ್ ಜೈನ್ ಪರಿಚಯಿಸಿದರು. ಸ್ವಯಂ ಸೇವಕಿ ಸೌಜನ್ಯ ಸ್ವಾಗತಿಸಿ , ಇಂಚರ ವಂದಿಸಿದರು. ಸಾಕ್ಷಿ ನಿರೂಪಿಸಿದರು.