ಪುತ್ತೂರಿನ ಸಂತ ಫಿಲೋಮಿನಾ ಕಾಲೇಜ್‍ನ ಎನ್.ಸಿ.ಸಿ. ಅಧಿಕಾರಿ ಲೆಫ್ಟಿನೆಂಟ್ ಜೊನ್ಸನ್ ಡೇವಿಡ್ ಸಿಕ್ವೇರ ಅವರು ಎನ್.ಸಿ.ಸಿ. ಕ್ಯಾಪ್ಟನ್ ಪದವಿಗೆ ಭಡ್ತಿಗೊಂಡಿದ್ದಾರೆ.
ನಾಗಪುರದಲ್ಲಿನ ಎನ್.ಸಿ.ಸಿ. ಅಧಿಕಾರಿಗಳ ತರಬೇತಿ ಕೇಂದ್ರ ದಲ್ಲಿ ನಡೆದ ರಿಫ್ರೆಷರ್ ಕೋರ್ಸ್‍ನ್ನು ವಿಶಿಷ್ಟ ಶ್ರೇಣಿಯೊಂದಿಗೆ ಯಶಸ್ವಿಯಾಗಿ ಮುಗಿಸಿದ ಅವರು ಭಡ್ತಿಹೊಂದಿ ಕಮಾಂಡೆಂಟ್ ಪದವಿಯೊಂದಿಗೆ ಪದಕ ಪಡೆದುಕೊಂಡಿದ್ದಾರೆ. ಮಾರ್ಚ್ ತಿಂಗಳಲ್ಲಿ ನಾಗಪುರದ ಎನ್.ಸಿ.ಸಿ. ನಾಗಪುರದ ಎನ್.ಸಿ.ಸಿ. ಅಧಿಕಾರಿಗಳ ತರಬೇತಿ ಕೇಂದ್ರದಲ್ಲಿ 20 ದಿನಗಳ ರಿಫ್ರೆಷರ್ ಕೋರ್ಸನ್ನು ವಿಶಿಷ್ಟ ಶ್ರೇಣಿಯೊಂದಿಗೆ ತಮ್ಮಕೋರ್ಸನ್ನು ಯಶಸ್ವಿಯಾಗಿ ಮುಗಿಸಿದರು.
ಎನ್.ಸಿ.ಸಿ. ನಿರ್ದೇಶನಾಲಯ ನವದೆಹಲಿ ಮತ್ತು ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯ ಬೆಂಗಳೂರಿನ ಉನ್ನತ ಅಧಿಕಾರಿಗಳು ಕಮಾಂಡೆಂಟ್ ಪದವಿಗೆ ತಮ್ಮ ಅಂಕಿತವನ್ನು ಹಾಕಿದ್ದಾರೆ. 2014ರಂದು ಲೆಪ್ಟಿನೆಂಟ್ ಪದವಿಗೆ ಭಡ್ತಿಗೊಂಡು ಎನ್.ಸಿ.ಸಿ ನಾಗಪುರದ ಅಧಿಕಾರಿಗಳ ತರಬೇತಿ ಕೇಂದ್ರದಲ್ಲಿ ಮೂರು ತಿಂಗಳಿನ ತರಬೇತಿಗಳನ್ನು ಮುಗಿಸಿದ್ದಾರೆ. 2020ರ ನವದೆಹಲಿಯ ಗಣರಾಜ್ಯೋತ್ಸವ ಪೆರಡಿನಲ್ಲಿ ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯದ ಕಂಟಿನ್ಜಂಟ್ ಅಧಿಕಾರಿಯಾಗಿ ಸೇವೆಯನ್ನು ಗುರುತಿಸಿ ಎನ್‍ಸಿಸಿ ನಿರ್ದೇಶನಾಲಯ ನವದೆಹಲಿ ನೀಡುವ ಪ್ರತಿಷ್ಠಿತ ಡಿ.ಜಿ.ಎನ್.ಸಿ.ಸಿ. ಪದಕವನ್ನು ಪಡೆದಿದ್ದಾರೆ. ಅಲ್ಲದೆ 2018ರಲ್ಲಿ ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯ ನೀಡುವ ವಿಶಿಷ್ಟ ಡಿಡಿಜಿ ಕಮಂಡೇಶನ್ ಪದಕವನ್ನು ಪಡೆದುಕೊಂಡಿದ್ದಾರೆ.
ಸಂತ ಫಿಲೋಮಿನಾ ಕಾಲೇಜ್‍ನ ಪ್ರಸ್ತುತ ಕಲಾ ವಿಭಾಗದ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ, ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರಾಗಿರುವ ಜೊನ್ಸನ್ ಡೇವಿಡ್ ಸಿಕ್ವೇರ ಅವರ ಸೇವಾ ಅವಧಿಯಲ್ಲಿ ಕಾಲೇಜಿನ ಏಳು ಎನ್.ಸಿ.ಸಿ ಕೆಡೆಟ್‍ಗಳು ನವದೆಹಲಿಯ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ, ಮೂರು ಕೆಡೆಟುಗಳು ಅಖಿಲ ಭಾರತ ಅಖಿಲ ಭಾರತ ತಲ್ ಸೈನಿಕ್ ಕ್ಯಾಂಪ್‍ನಲ್ಲಿ ಆರು ಕೆಡೆಟ್‍ಗಳು ಭಾರತೀಯ ಸೈನ್ಯದಲ್ಲಿ ಸೇರ್ಪಡೆ, 200ಕ್ಕೂಅಧಿಕ ಕೆಡೆಟ್‍ಗಳು ಅಖಿಲಭಾರತ ಎನ್‍ಸಿಸಿ ಕ್ಯಾಂಪಿನಲ್ಲಿ ಮತ್ತು 900ಕ್ಕೂಅಧಿಕ ಕೆಡೆಟ್‍ಗಳು ರಾಜ್ಯಮಟ್ಟದ ವಿವಿಧ ಕ್ಯಾಂಪಿನಲ್ಲಿ ಭಾಗವಹಿಸಿದ್ದಾರೆ. ಅಲ್ಲದೆ 20ಕ್ಕೂಅಧಿಕ ಎನ್‍ಸಿಸಿ ಕ್ಯಾಂಪಿನಲ್ಲಿ ಭಾಗವಹಿಸಿ ಕ್ಯಾಂಪಿನ ದಂಡಾಧಿಕಾರಿಯಾಗಿ ತಮ್ಮ ಸೇವೆಯನ್ನು ನೀಡಿದ್ದಾರೆ.