ಸ್ನೇಹಿತನಿಂದಲೇ ವಿದ್ಯಾರ್ಥಿನಿಯ ಅತ್ಯಾಚಾರ – ಆರೋಪಿ ಅರೆಸ್ಟ್

ಶೇರ್ ಮಾಡಿ

ಕಾಲೇಜ್ ಒಂದರ ವಿದ್ಯಾರ್ಥಿನಿಯನ್ನು ಆಕೆಯ ಸ್ನೇಹಿತನೇ ಅಪಹರಿಸಿ ಅತ್ಯಾಚಾರ ಮಾಡಿದ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ಅತ್ಯಾಚಾರಗೈದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ನವೀನ್ (25) ಎಂದು ಗುರುತಿಸಲಾಗಿದೆ. ಯುವತಿ ಕಾಲೇಜ್‍ನಲ್ಲಿ ಪರೀಕ್ಷೆ ಬರೆಯುತ್ತಿದ್ದ ವೇಳೆ ಆರೋಪಿ ಹಾಗೂ ಆತನ ಮೂವರು ಸ್ನೇಹಿತರು ಆಕೆಯ ಸಹೋದರ ಬಂದಿದ್ದಾನೆ ಎಂದು ಕರೆದಿದ್ದಾರೆ. ಬಳಿಕ ಆಕೆ ಕಾಲೇಜ್‍ನಿಂದ ಹೊರಗೆ ಬರುತ್ತಿದ್ದಂತೆ ಆಟೋದಲ್ಲಿ ಅಪಹರಿಸಿದ್ದಾರೆ ಎಂದು ಯುವತಿ ಆರೋಪಿಸಿದ್ದಾಳೆ.

ಆಕೆಗೆ ಮತ್ತು ಬರುವ ಔಷಧಿ ನೀಡಿದ್ದಾರೆ. ಬಳಿಕ ಅಲ್ಲಿಂದ ಕೊಪ್ಪಳ ಜಿಲ್ಲೆಯ ಸಣಾಪುರ ಬಳಿಯ ಹೋಟೆಲ್‍ಗೆ ಕರೆದುಕೊಂಡು ಹೋಗಿ ಆರೋಪಿ ಅತ್ಯಾಚಾರ ಮಾಡಿದ್ದಾನೆ ಎಂದು ಯುವತಿ ಆರೊಪಿಸಿದ್ದಾಳೆ.

ಈ ಸಂಬಂಧ ನವೀನ್‌, ಸಾಕೀಬ್‌, ತನು ಸೇರಿ ನಾಲ್ವರ ವಿರುದ್ಧ ಬಳ್ಳಾರಿ ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿದೆ. ನವೀನ್‍ನನ್ನು ಪೊಲೀಸರು ಬಂಧಿಸಿದ್ದು, ಉಳಿದ ಮೂರು ಜನ ಆರೋಪಿಗಳಿಗೆ ಪೊಲೀಸರು ಬಲೆ ಬೀಸಿದ್ದಾರೆ.

Leave a Reply

error: Content is protected !!