ನೆಲ್ಯಾಡಿ: ಶ್ರಮ ಸೇವೆಯನ್ನು ಮಾಡಲು ಶಿಕ್ಷಣದ ಜೊತೆಜೊತೆಯಲ್ಲಿ ರಾಷ್ಟ್ರೀಯತೆಯನ್ನು ಮೂಡಿಸುವಂತಹ ರಾಷ್ಟ್ರೀಯ ಯೋಜನೆ ಕಾರ್ಯಕ್ರಮ, ಇದು ಸೇವೆಯನ್ನು ಮಾಡುವಂತ ಯೋಜನೆಯಾಗಿದೆ, ಶಿಕ್ಷಣ ಒಂದು ಹಂತದಲ್ಲಿ ಆದರೆ ನಾವು ಬದುಕಲು ಒಂದಿಷ್ಟು ಚಟುವಟಿಕೆ, ಮಾಹಿತಿಗಳು, ಹೊರಪ್ರಪಂಚದ ಶಿಕ್ಷಣ ಬೇಕಾಗುತ್ತದೆ, ಅದಕ್ಕಾಗಿಯೇ ಕಾಲೇಜುಗಳಲ್ಲಿ ಎನ್ಎಸ್ಎಸ್ ಘಟಕವನ್ನು ಆರಂಭಿಸಿ ಆ ಮುಖಾಂತರ ವಿದ್ಯಾರ್ಥಿಗಳಿಗೆ ರಾಷ್ಟ್ರೀಯತೆಯ ಬಗ್ಗೆ ಅಭಿಮಾನ, ವಿಶ್ವಾಸ, ಪ್ರೀತಿ ಬರುವಂತೆ ಹಾಗೂ ಸ್ವಾವಲಂಬಿಗಳಾಗಿ ಬದುಕಲು ಏನೆಲ್ಲ ದಾರಿಗಳಿವೆ ಎಂಬುದನ್ನು ತೋರಿಸಿಕೊಳ್ಳಲು ಈ ಯೋಜನೆಯು ಸಹಕಾರಿಯಾಗಿದೆ ಎಂದು ನೆಲ್ಯಾಡಿ ಪಡುಬೆಟ್ಟು ದ.ಕ.ಜಿ.ಪಂ.ಹಿ.ಪ್ರಾ. ಶಾಲೆಯಲ್ಲಿ ಕಡಬ ಸರಕಾರಿ ಪದವಿಪೂರ್ವ ಕಾಲೇಜು ನ ರಾಷ್ಟ್ರೀಯ ಸೇವಾ ಯೋಜನೆಯ 2023-24ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರವನ್ನು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ನೆಲ್ಯಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸಲಾಂ ಬಿಲಾಲ್, ಕಡಬ ಸರಕಾರಿ ಪದವಿ ಪೂರ್ವ ಕಾಲೇಜಿನ ಶಾಲಾ ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷರಾದ ಕೃಷ್ಣ ಶೆಟ್ಟಿ, ನೆಲ್ಯಾಡಿ ಎಲೈಟ್ ಇಂಡಸ್ಟ್ರೀಸ್ ಮಾಲಕರಾದ ಶಾಜಿ ಯು.ಪಿ, ಶ್ರೀ ಶಾಸ್ತಾರೇಶ್ವರ ದೇವಸ್ಥಾನ, ಕುತ್ರಾಡಿ ಹಾರ್ಪಾಳ ಅಧ್ಯಕ್ಷರಾದ ಸುಂದರ ಗೌಡ ಅತ್ರಿಜಾಲು, ಕಡಬ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವಾಸುದೇವ ಗೌಡ ಕೋಲ್ಪೆ, ಕಡಬ ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷರಾದ ಶಿವಪ್ರಸಾದ್ ಮೈಲೇರಿ, ಶಿಕ್ಷಕರಕ್ಷಕ ಸಂಘದ ಅಧ್ಯಕ್ಷರಾದ ಶಿವಪ್ರಸಾದ್ ಬೀದಿಮಜಲು, ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಜೆಸ್ಸಿ ಕೆ.ಎ, ನೆಲ್ಯಾಡಿ ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ಪ್ರಕಾಶ್ ಬಾಕಿಲ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನೆಲ್ಯಾಡಿ ಮೇಲ್ವಿಚಾರಕರಾದ ವಿಜೇಶ್ ಚೈನ್,ಯೋಜನಾಧಿಕಾರಿ ಸಲೀಂ ಕೆ.ಪಿ, ಘಟಕ ನಾಯಕರಾದ ಶಿವಪ್ರಸಾದ್, ಪುಣ್ಯ ಶ್ರೀ ಉಪಸ್ಥಿತರಿದ್ದರು.