ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜಿನಲ್ಲಿ ಹುಲಿ ಕುಣಿತದ ಪ್ರದರ್ಶನ

ಶೇರ್ ಮಾಡಿ

ಕುಕ್ಕೆ ಶ್ರೀ ಸುಬ್ರಮಣ್ಯೇಶ್ವರ ಪದವಿ ಕಾಲೇಜಿನಲ್ಲಿ ನವರಾತ್ರಿ ಪ್ರಯುಕ್ತ ಅ.15ರಂದು ಸುಬ್ರಹ್ಮಣ್ಯದ ಕುಕ್ಕೆ ಟೈಗರ್ಸ್ ತಂಡದ ಹುಲಿ ಕುಣಿತದ ಪ್ರದರ್ಶನ ಜರಗಿತು.

ಸುಮಾರು ಮೂವತ್ತು ಹುಲಿ ವೇಷಧಾರಿಗಳು ಕಾಲೇಜಿನ ಮುಂಭಾಗದಲ್ಲಿ ಅತ್ಯಾಕರ್ಷವಾದ ಪ್ರದರ್ಶನವನ್ನು ನೀಡಿದರು.

ಕಾಲೇಜಿನ ವಿದ್ಯಾರ್ಥಿಗಳು ಹುಲಿ ವೇಷದಾರಿಗಳೊಂದಿಗ ಹೆಜ್ಜೆ ಹಾಕಿ ಸಂಭ್ರಮಿಸಿದರು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲಾ ಉಪನ್ಯಾಸಕರು ಹಾಜರಿದ್ದು ಹುಲಿ ವೇಷದಾರಿಗಳನ್ನ ಪ್ರಶಂಸಿದರು.

ವಿದ್ಯಾರ್ಥಿಗಳಿಗೆ ತುಳುನಾಡಿನ ಸಂಸ್ಕೃತಿಯನ್ನು ತೋರಿಸುವುದು ಈಕಾರ್ಯಕ್ರಮದ ಉದ್ದೇಶವಾಗಿತ್ತು. ಕಾರ್ಯಕ್ರಮದ ಯೋಜನೆಯನ್ನು ಕಾಲೇಜಿನ ಸಾಂಸ್ಕೃತಿಕ ತಂಡದ ಸಂಯೋಜಕರಾದ ವಿನ್ಯಾಸ್ ಹೊಸೊಳಿಕೆ ಮಾಡಿದ್ದರು.

Leave a Reply

error: Content is protected !!