ನೆಲ್ಯಾಡಿ: ತೆಲಂಗಾಣ ರಾಜ್ಯದ ವಾರಂಗಲ್ ನಲ್ಲಿ ನಡೆಯುತ್ತಿರುವ ದಕ್ಷಿಣ ವಲಯ ಅಂತರ್ ರಾಜ್ಯ ಮಟ್ಟದ ಜೂನಿಯರ್ ಅಥ್ಲೆಟಿಕ್ಸ್ 18ರ ವಯೋಮಾನದ ಬಾಲಕರ ಕ್ರೀಡಾಕೂಟದಲ್ಲಿ ಆದರ್ಶ್ ಶೆಟ್ಟಿ ಇವರು ಎತ್ತರ ಜಿಗಿತ ಸ್ಪರ್ಧೆಯಲ್ಲಿ ಬೆಳ್ಳಿಯ ಪದಕದೊಂದಿಗೆ ದ್ವಿತೀಯ ಸ್ಥಾನ ಪಡೆದು ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ದೈಹಿಕ ಶಿಕ್ಷಕರಾದ ಏಲಿಯಸ್ ಪಿಂಟೋ, ರಾಜೇಶ್ ಮೂಲ್ಯ ಹಾಗೂ ಪುಷ್ಪರಾಜ್ ಇವರಿಗೆ ತರಬೇತಿಯನ್ನು ನೀಡಿದ್ದಾರೆ.
ಪ್ರಸ್ತುತ ಇವರು ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿ. ನೆಲ್ಯಾಡಿ ಜ್ಞಾನೋದಯ ಬೆಥನಿ ವಿದ್ಯಾಸಂಸ್ಥೆಯ ಹಳೆವಿದ್ಯಾರ್ಥಿ.
ನೆಲ್ಯಾಡಿ ಅಶ್ವಮೇಧ ಕ್ಯಾಟರರ‍್ಸ್ ಮಾಲಕರಾದ ರತ್ನಾಕರ ಶೆಟ್ಟಿ ಮತ್ತು ಶ್ರೀಮತಿ ಹೇಮಲತಾ ಅವರ ಪುತ್ರ.