5 ವರ್ಷದ ಮಗಳನ್ನು ಸೊಂಟಕ್ಕೆ ಕಟ್ಟಿಕೊಂಡು ಕೆರೆಗೆ ಹಾರಿದ ತಾಯಿ!

ಶೇರ್ ಮಾಡಿ

ಐದು ವರ್ಷದ ಮಗಳನ್ನು ಸೊಂಟಕ್ಕೆ ಕಟ್ಟಿಕೊಂಡು ತಾಯಿ ಕೆರೆಗೆ ಹಾರಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ಕವಿತಾ (27) ಹಾಗೂ ನಿಹಾರಿಕಾ(05) ಆತ್ಮಹತ್ಯೆ ಮಾಡಿಕೊಂಡ ತಾಯಿ-ಮಗಳು. ಮೃತ ಕವಿತಾ ಚನ್ನಗಿರಿ ತಾಲೂಕಿನ ಹೊನ್ನೆಬಾಗಿ ಗ್ರಾಮದ ನಿವಾಸಿ ಮಂಜುನಾಥ್ ಪತ್ನಿ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಕೆರೆಬಿಳಚಿ ಬಳಿ ಇರುವ ಐತಿಹಾಸಿಕ ಪ್ರವಾಸಿ ತಾಣ ಸೂಳೆಕೆರೆಯಲ್ಲಿ ಈ ಘಟನೆ ನಡೆದಿದೆ.

ಕಳೆದ ಶುಕ್ರವಾರ ಮಗಳು ನಿಹಾರಿಕಾಳೊಂದಿಗೆ ಕವಿತಾ ಕಾಣೆಯಾಗಿದ್ದಳು. ಈ ಬಗ್ಗೆ ಪತಿ ಮಂಜುನಾಥ್ ಪೊಲೀಸರಿಗೆ ದೂರು ಕೊಟ್ಟಿದ್ದರು. ಇಂದು ಸೂಳೆಕೆರೆಯಲ್ಲಿ ತಾಯಿ-ಮಗಳ ಶವ ಪತ್ತೆಯಾಗಿದೆ. ಸೂಳೆಕೆರೆಗೆ ಹಾರುವ ಮುನ್ನ ಮಗಳನ್ನ ವೇಲ್ ನಿಂದ ಕಟ್ಟಿಕೊಂಡು ಕವಿತಾ ಕೆರೆಗೆ ಹಾರಿದ್ದಾರೆ.

ಮೂಲತಃ ಎರೇಹಳ್ಳಿಯ ನಿವಾಸಿಯಾದ ಕವಿತಾ ಅವರು ಆರು ವರ್ಷದ ಹಿಂದೆ ಹೊನ್ನೆಬಾಗಿ ಮಂಜುನಾಥ್‍ನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ದಂಪತಿಗೆ ಐದು ವರ್ಷದ ನಿಹಾರಿಕಾ ಎಂಬ ಓರ್ವ ಮಗಳಿದ್ದಳು. ಬಳಿಕ ವರದಕ್ಷಿಣೆ ಕಿರುಕಳ ಆರೋಪ ಕೇಳಿಬಂದಿತ್ತು.

ಕಳೆದ ಕೆಲ ವರ್ಷಗಳಿಂದ ಪತಿ ಹಾಗೂ ಅವರ ಮನೆಯವರು ನಿರಂತರ ವರದಕ್ಷಿಣೆ ಕಿರುಕಳ ನೀಡುತ್ತಿದ್ದರು. ಪತಿ ಹಾಗೂ ಪತಿ ಮನೆಯವರ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಕವಿತಾ ಕುಟುಂಬಸ್ಥರು ಆರೋಪಿಸಿದ್ದಾರೆ.

ಕವಿತಾಳ ಮನೆಯವರು ಪೊಲೀಸರಿಗೆ ದೂರು ನೀಡಿದ್ದು, ಈ ಸಂಬಂಧ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

error: Content is protected !!
%d bloggers like this: