ಬಿಪಿಎಲ್​, ಎಪಿಎಲ್​ ಕಾರ್ಡ್​ದಾರರಿಗೆ ಗುಡ್​ ನ್ಯೂಸ್​​ ನೀಡಿದ ಸರ್ಕಾರ

ಶೇರ್ ಮಾಡಿ

ಬಿಪಿಎಲ್​​ ಮತ್ತು ಎಪಿಎಲ್​ ಕಾರ್ಡ್​ದಾರರಿಗೆ ಆಹಾರ ಇಲಾಖೆ ಗುಡ್​ ನ್ಯೂಸ್​ ನೀಡಿದೆ. ಬಿಪಿಎಲ್​​ ಮತ್ತು ಎಪಿಎಲ್​​​​ ಕಾರ್ಡ್​​​​ ತಿದ್ದುಪಡಿಗೆ ಮತ್ತೆ ಅವಕಾಶ ನೀಡಿ ಆಹಾರ ಇಲಾಖೆ ಸುತ್ತೋಲೆ ಹೊರಡಿಸಿದೆ. ಬಿಪಿಎಲ್ ಮತ್ತು ಎಪಿಎಲ್​ ಕಾರ್ಡ್​​ ತಿದ್ದಪಡಿಗೆ ಹೆಚ್ಚಿನ ಸಮಯ‌ ನೀಡಿವಂತೆ ಮನವಿ ಬಂದ ಹಿನ್ನೆಲೆಯಲ್ಲಿ ಆಹಾರ ಇಲಾಖೆ ಸಮಯವನ್ನು ವಿಸ್ತರಿಸಿದೆ. ಕೇವಲ ತಿದ್ದುಪಡಿಗೆ ಹೆಚ್ಚಿನ ಸಮಯದ ನೀಡಿ ಎಂದು ಬೇಡಿಕೆ ಬಂದ ಜಿಲ್ಲೆಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಈ ಬಾರಿ ಸರ್ವರ್ 2 ಮತ್ತು 3ರಲ್ಲಿ ಮಾತ್ರ ತಿದ್ದಪಡಿಗೆ ಅವಾಕಾಶವಿದೆ. ಬೆಂಗಳೂರು ಒನ್​, ಕರ್ನಾಟಕ ಒನ್, ಗ್ರಾಮ ಒನ್ ಕೇಂದ್ರಗಳಲ್ಲಿ ತಿದ್ದುಪಡಿಗೆ ಅವಕಾಶ ನೀಡಲಾಗಿದೆ.

ಸರ್ವರ್ 2: ಬಾಗಲಕೋಟೆ, ಬೆಳಗಾವಿ, ಚಾಮರಾಜಪೇಟೆ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಧಾರವಾಡ, ಗದಗ, ಹಾಸನ, ಹಾವೇರಿ, ಕೊಡಗು, ಮಂಡ್ಯ, ಮೈಸೂರು, ಉಡುಪಿ, ಉತ್ತರ ಕನ್ನಡ, ವಿಜಯಪುರ ಜಿಲ್ಲೆಗಳಲ್ಲಿ ದಿನಾಂಕ 16, 17 ಮತ್ತು 18 ನೇ ತಾರೀಖಿನಂದು ಬೆಳ್ಳಗ್ಗೆ 10 ಗಂಟೆಯಿಂದ ಸಂಜೆ 7 ಗಂಟೆಯವರೆಗೂ ತಿದ್ದಪಡಿ ಮಾಡಿಕೊಳ್ಳಬಹುದಾಗಿದೆ.

ಸರ್ವರ್​ 3: ಬಳ್ಳಾರಿ, ಬಿದರ್, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ , ಕಲಬುರಗಿ, ಕೋಲಾರ, ಕೊಪ್ಪಳ, ರಾಯಚೂರು, ರಾಮನಗರ, ಶಿವಮೊಗ್ಗ, ತುಮಕೂರು, ಯಾದಗಿರಿ, ವಿಜಯನಗರ ಜಿಲ್ಲೆಗಳಲ್ಲಿ ದಿನಾಂಕ, 19,20, 21ರಂದು ಬೆಳ್ಳಗ್ಗೆ 10 ಗಂಟೆಯಿಂದ ಸಂಜೆ 7 ಗಂಟೆಯವರೆಗೂ ತಿದ್ದುಪಡಿಗೆ ಅವಕಾಶ ನೀಡಲಾಗಿದೆ.

ಈ ಹಿಂದೆ ಆಹಾರ ಇಲಾಖೆ ಅ.5 ರಿಂದ 13ರವರೆಗೆ ತಿದ್ದುಪಡಿ ಮಾಡಿಕೊಳ್ಳಲು ಕಾಲಾವಕಾಶ ನೀಡಿತ್ತು. 9 ದಿನಗಳಲ್ಲಿ ಒಟ್ಟು 60 ರಿಂದ 70 ಸಾವಿರದಷ್ಟು ಅರ್ಜಿಗಳು ಬಂದಿದ್ದು, ಆಹಾರ ಇಲಾಖೆ ಈಗಾಗಲೇ ಅರ್ಜಿಗಳನ್ನು ಪರಿಶೀಲನೆ ಮಾಡುತ್ತಿದೆ. ನೀಡಿರುವ ದಾಖಾಲೆಗಳು ಸರಿ ಇದ್ದರೇ ಮಾತ್ರ ಕಾರ್ಡ್ ವಿತರಣೆ ಮಾಡಲಾಗುತ್ತದೆ.

Leave a Reply

error: Content is protected !!
%d