ಕೊಕ್ಕಡ :ಸುರಿದ ಭಾರಿ ಗಾಳಿ ಮಳೆಗೆ ಸೌತಡ್ಕ ಸಮೀಪದ ಕೆಲವು ಮನೆಗಳಿಗೆ ಹಾನಿ

ಶೇರ್ ಮಾಡಿ

ಕೊಕ್ಕಡ: ಸೋಮವಾರ ಸಂಜೆ ಸುರಿದ ಭಾರಿ ಗಾಳಿ ಮಳೆಗೆ ಸೌತಡ್ಕ ಸಮೀಪದ ಕೆಲವು ಮನೆಗಳಿಗೆ ಹಾನಿಯಾಗಿದ್ದು, ಮನೆಯಲ್ಲಿದ್ದವರು ಪ್ರಾಣಪಾಯದಿಂದ ಪಾರಾಗಿದ್ದಾರೆ.

ಇಲ್ಲಿ ನಿವಾಸಿಗಳಾದ ಜಮೀಲಾ, ಮರಿಯಮ್ಮ, ಪಾರ್ವತಿ, ಸುರೇಶ್ ಪೂಜಾರಿ, ಮೂಸೆ ಕುಂಞಿ, ಜೋಹರ, ಹಮೀದ್ ಎಂಬುವರ ಮನೆಗೆ ಭಾಗಶಃ ಹಾನಿಯಾಗಿದ್ದು, ಮನೆಯ ಹೆಂಚು ಮತ್ತು ಶೀಟುಗಳು ಹಾರಿಹೋಗಿವೆ.

ಈ ಸಂದರ್ಭ ಕೆಲವು ಮನೆಗಳಲ್ಲಿ ಹಿರಿಯರು ಮತ್ತು ಪುಟ್ಟ ಮಗು ಮನೆಯೊಳಗಿದ್ದು ಅದೃಷ್ಟವಶಾತ್ ಯಾವುದೇ ತೊಂದರೆಯಾಗದೆ ಪಾರಾಗಿದ್ದಾರೆ.

ಸ್ಥಳಕ್ಕೆ ಕೊಕ್ಕಡ ಗ್ರಾಮಕರಣಿಕ ರಫೀಕ್ ಎನ್ ಮುಲ್ಲಾ ಮತ್ತು ಗ್ರಾಮ ಸಹಾಯಕರಾದ ಮೋಹನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳೆದೆರಡು ದಿನಗಳಿಂದ ಕೊಂಚ ವಿರಮಿಸಿದ್ದ ಮಳೆ ಸೋಮವಾರ ಮತ್ತೆ ತನ್ನ ಪ್ರತಾಪವನ್ನು ತೋರಿಸಿದೆ.

Leave a Reply

error: Content is protected !!
%d