ಸಿಡಿಲಿಗೆ ಶಾರ್ಟ್ ಸರ್ಕ್ಯೂಟ್: ಅಡ್ಲ್ಯಾಬ್ ಫೋಟೋ ಸ್ಟುಡಿಯೋಗೆ ಹಾನಿ

ಶೇರ್ ಮಾಡಿ

ಸಿಡಿಲಿನ ಹೊಡೆತಕ್ಕೆ ಶಾರ್ಟ್ ಸರ್ಕ್ಯೂಟ್ ಉಂಟಾಗಿ ನಗರದ ಆಡ್ಲ್ಯಾಬ್ ಫೋಟೋ ಸ್ಟುಡಿಯೋ ಗೆ ಹಾನಿಯಾದ ಘಟನೆ ಮಂಗಳವಾರ ಸಂಜೆ ನಡೆದಿದೆ.

ಸಿಡಿಲಿನ ಹೊಡೆತಕ್ಕೆ ಸ್ಟುಡಿಯೋದಲ್ಲಿನ ವಸ್ತಗಳು ಸಂಪೂರ್ಣ ಭಸ್ಮಗೊಂಡಿದೆ. ನಗರದ ಜಿ ಎಲ್ ಕಾಂಪ್ಲೆಕ್ಸ್ ನ ಕಟ್ಟಡದಲ್ಲಿರುವ ಆಡ್ಲ್ಯಾಬ್ ಫೋಟೋ ಸ್ಟುಡಿಯೋಗೆ ಹಾನಿಯಾಗಿದ್ದು, ಇಲ್ಲಿನ ಸಿಬ್ಬಂದಿಗಳು ಅಪಾಯದಿಂದ ಪಾರಾಗಿದ್ದಾರೆ.

ವಿದ್ಯುತ್ ಅಘಾತದಿಂದ ಸ್ಟುಡಿಯೋದಲ್ಲಿದ್ದ ಕಂಪ್ಯೂಟರ್ ಸಿಸ್ಟಂ, ಫೋಟೊ ಮೆಷಿನರಿ, ಪ್ಯಾನ್, ಫೋಟೊ ಆಲ್ಬಂ, ಇನ್ನಿತರ ವಸ್ತಗಳು ಸುಟ್ಟು ಹೋಗಿದ್ದು, ಸುಮಾರು ರೂ.6 ಲಕ್ಷ ಅಂದಾಜು ನಷ್ಟ ಸಂಭವಿಸಿದೆ. ಗ್ರಾಹಕರಿಗೆ ನೀಡಬೇಕಾಗಿದ್ದ ಹಲವು ಮದುವೆ ಆಲ್ಬಂಗಳು ಸುಟ್ಟು ಭಸ್ಮವಾಗಿದೆ ಎಂದು ತಿಳಿದು ಬಂದಿದೆ. ಮಾಹಿತಿ ಅರಿತು ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು. ಸ್ಥಳೀಯ ಹೋಟೆಲ್ ನ ಸಿಬ್ಬಂದಿ ಬೆಂಕಿ ನಂದಿಸಲು ಸಹಕರಿಸಿದರು.

Leave a Reply

error: Content is protected !!