
ಕಾಂಗ್ರೆಸ್ ಮುಖಂಡ ನೊಂದಿಗೆ ಮಹಿಳೆಯ ಹೆಸರು ಸೇರಿಸಿ ಕೆಟ್ಟ ಪದ ಬಳಕೆ ಆರೋಪ ಹಿನ್ನಲೆ, ಯುವಕನೋರ್ವನಿಗೆ ಮಹಿಳೆ ಚಪ್ಪಲಿಯಿಂದ ಹಿಗ್ಗಾಮುಗ್ಗಾ ತಳಿಸಿರುವಂತಹ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಅಳ್ವಕೋಡಿಯಲ್ಲಿ ನಡೆದಿದೆ. ಕಾಂಗ್ರೆಸ್ ಮುಖಂಡ ಗಜೂ ನಾಯ್ಕ ಅವರ ಸ್ಟೇಪ್ನಿ ಎಂದು ಮಹಿಳೆ ಗಂಡನ ಮುಂದೆ ವ್ಯಕ್ತಿಯೋರ್ವ ನಿಂದಿಸಿದ ಆರೋಪದ ಮೇಲೆ ಇಬ್ಬರು ತಳಿಸಿ ಅದನ್ನ ವಿಡಿಯೋ ಮಾಡಿ ಸಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ.
ಕುಮಟಾದ ಕೃಷ್ಣ ನಾಯ್ಕ ಎಂಬ ವ್ಯಕ್ತಿಯೇ ಹಲ್ಲೆಗೊಳಗಾದವನಾಗಿದ್ದಾನೆ. ಕಾಂಗ್ರೆಸ್ ಮುಖಂಡ ಗಜೂ ನಾಯ್ಕ ಮತ್ತು ಅಳ್ವೆಕೋಡಿಯ ಸವಿತಾ ಪಟಗಾರ್ ಇಬ್ಬರ ನಡುವೆ ಸಂಬಂಧವಿದೆ ಎಂದು ಸವಿತಾ ಅವರ ಗಂಡನ ಮುಂದೆ ಈತ ಹೇಳಿ ನಿಂದಿಸಿದ್ದಾನೆ. ವಿಷಯ ತಿಳಿದ ವ್ಯಕ್ತಿ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿದ ವಿಡಿಯೋ ವೈರಲ್ ಆಗುತ್ತಿದ್ದಂತೆ ಹಲ್ಲೆ ನಡೆಸಿದವರ ವಿರುದ್ಧ ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

