ಕ್ಯಾಪ್ಟನ್ ಸೋಲಿಸಿ ಕ್ಯಾಪ್ಟನ್ ಆದ ‘ಬಿ ಬಾಸ್’ ರಕ್ಷಕ್

ಶೇರ್ ಮಾಡಿ

ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ನಡುವೆ ಪೈಪೋಟಿ ಜೋರಾಗಿದೆ. ಇದೀಗ ಕ್ಯಾಪ್ಟನ್ ಪಟ್ಟಕ್ಕೆ ಸ್ಪರ್ಧಿಗಳ ಮಧ್ಯೆ ಹಣಾಹಣಿ ನಡೆದಿದೆ. ನಮ್ಮನೆ ಯುವರಾಣಿ ಖ್ಯಾತಿಯ ಸ್ನೇಹಿತ್‌ಗೆ ಠಕ್ಕರ್ ಕೊಟ್ಟು ಮನೆಯ ಕ್ಯಾಪ್ಟನ್ ಆಗಿ ರಕ್ಷಕ್ ಬುಲೆಟ್ ಆಯ್ಕೆಯಾಗಿದ್ದಾರೆ. ನಡೆದ ಟಾಸ್ಕ್ ನಲ್ಲಿ ಗಟ್ಟಿ ಪೈಪೋಟಿ ನೀಡಿದ್ದಾರೆ.

ದೊಡ್ಮನೆಯ ಅಸಲಿ ಆಟ ಈಗ ಶುರುವಾಗಿದೆ. ಮೊದಲನೇ ವಾರ ಸ್ನೇಹಿತ್ ಕ್ಯಾಪ್ಟನ್ ಆಗಿ ಮನೆಯ ಸ್ಪರ್ಧಿಗಳ ಮನಗೆದ್ದರು. ಅದರಂತೆ 2ನೇ ವಾರದ ಕ್ಯಾಪ್ಟನ್ ಆಗಲು ಕೂಡ ರಕ್ಷಕ್ ಬುಲೆಟ್ ಜೊತೆ ಮತ್ತೆ ಸ್ನೇಹಿತ್ ಪೈಪೋಟಿ ನೀಡಿದರು. ಚೆಂಡನ್ನು ಪಿರಾಮಿಡ್ ಆಕಾರದಲ್ಲಿ ಜೋಡಿಸುವ ಟಾಸ್ಕ್ ಅನ್ನು ಬಿಗ್ ಬಾಸ್ ನೀಡಿದ್ದರು. ಈ ಟಾಸ್ಕ್ ನಲ್ಲಿ ಸ್ನೇಹಿತ್‌ಗೆ ಠಕ್ಕರ್ ಕೊಟ್ಟು ರಕ್ಷಕ್ ಗೆದ್ದು ಬೀಗಿದ್ದಾರೆ.

ರಕ್ಷಕ್ ಗೆಲುವಿಗೆ ಬಿಗ್ ಬಾಸ್ ಅಭಿನಂದನೆ ತಿಳಿಸಿ ಸ್ಪೆಷಲ್ ಉಡುಗೊರೆಯೊಂದನ್ನ ಕಳುಹಿಸಿದ್ದಾರೆ. ರಕ್ಷಕ್ ಅವರು ಮನೆಯವರ ಫೋಟೋ ಕಳುಹಿಸಲು ಕೇಳಿಕೊಂಡಿದ್ದರು. ಅದರಂತೆ ಕ್ಯಾಪ್ಟನ್ ಆದ ಬಳಿಕ ಕುಟುಂಬದ ಫೋಟೋವನ್ನೇ ಗಿಫ್ಟ್ ಆಗಿ ನೀಡಿದ್ದಾರೆ. ರಕ್ಷಕ್ ಕೂಡ ನೋಡಿ ಖುಷಿಪಟ್ಟಿದ್ದಾರೆ.

`ಗುರುಶಿಷ್ಯರು’ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ರಕ್ಷಕ್ ಬುಲೆಟ್ ಎಂಟ್ರಿ ಕೊಟ್ಟರು. ಡಿ ಬಾಸ್ ಅಭಿಮಾನಿ ಆಗಿರುವ ರಕ್ಷಕ್ ಈಗ ದೊಡ್ಮನೆಯಲ್ಲಿ ಕಮಾಲ್ ಮಾಡ್ತಿದ್ದಾರೆ. ಸದಾ ಟ್ರೋಲ್ ಮೂಲಕ ಸದ್ದು ಮಾಡಿರುವ ರಕ್ಷಕ್, ಬಿಗ್ ಬಾಸ್ ವಿನ್ನರ್ ಪಟ್ಟ ಪಡೆದು ಗೆದ್ದು ಬೀಗುತ್ತಾರಾ ಎಂದು ಕಾಯಬೇಕಿದೆ.

Leave a Reply

error: Content is protected !!