ಅ.22ರಂದು ಉಜಿರೆ ಗ್ರಾಮ ಪಂಚಾಯತ್ ನ ಸಂಜೀವಿನಿ ಸಭಾಭವನದಲ್ಲಿ ಅಣಬೆ ಬೇಸಾಯ ತರಬೇತಿ

ಶೇರ್ ಮಾಡಿ

ಉಜಿರೆ: ಕರಿಗಂಧ ಸೇವಾ ಟ್ರಸ್ಟ್, ಉಜಿರೆ ಇದರ ಆಶ್ರಯದಲ್ಲಿ ಒಂದು ದಿನದ ಅಣಬೆ ಬೇಸಾಯ ಪ್ರಾತ್ಯಕ್ಷಿಕೆಯ ತರಬೇತಿಯು ಉಜಿರೆ ಗ್ರಾಮ ಪಂಚಾಯತ್ ನ ಸಂಜೀವಿನಿ ಸಭಾಭವನದಲ್ಲಿ ನಡೆಯಲಿದೆ.

ಅತ್ಯುತ್ತಮ ಕೃಷಿ ಚಟುವಟಿಕೆಗಳ ತರಬೇತುದಾರರಾದ ಸುಲೈಮಾನ್ ಬೆಳಾಲು ರವರು ತರಬೇತಿ ನೀಡಲಿದ್ದಾರೆ.

ಕರಿಗಂಧ ಸೇವಾ ಟ್ರಸ್ಟ್ ನ “ಬನ್ನಿ ಕೈ ಜೋಡಿಸಿ ಅಶಕ್ತರಿಗೆ ಆಸರೆಯಾಗೋಣ!” ಎಂಬ ಉದ್ದೇಶಕ್ಕಾಗಿ ಸ್ವ ಉದ್ಯೋಗ ತರಬೇತಿ ಹಾಗೂ ಅನಾರೋಗ್ಯಕ್ಕೆ ತುತ್ತಾದ ಬಡ ಕುಟುಂಬಗಳಿಗೆ ಧನಸಹಾಯವನ್ನು ನೀಡಿ ಸೇವೆ ಮಾಡಲಾಗುತ್ತೇವೆ ಎಂದು ಟ್ರಸ್ಟ್ ನ ಎಲ್ಲಾ ಪದಾಧಿಕಾರಿಗಳು ತಿಳಿಸಿರುತ್ತಾರೆ.

ದಿನಾಂಕ 22/10/2023 ರಂದು ಬೆಳಿಗ್ಗೆ 9ರಿಂದ ಮದ್ಯಾಹ್ನ 1 ಗಂಟೆಯ ತನಕ ನಡೆಯುವ ಅಣಬೆ ಬೇಸಾಯ ಪ್ರಾತ್ಯಕ್ಷಿಕೆಯ ಉಚಿತ ತರಬೇತಿಗೆ ಹೆಸರು ನೊಂದಾಯಿಸಬಹುದು

ಉಜಿರೆ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9108227060 ಕಿರಣ್ ಉಜಿರೆ ಸಂಚಾಲಕರು ಕರಿಗಂಧ ಸೇವಾ ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Leave a Reply

error: Content is protected !!
%d