ಜಿಂಕೆ ಅಡ್ಡ ಬಂದು ಕಾರು ಪಲ್ಟಿ: ಮೂವರಿಗೆ ಗಾಯ

ಶೇರ್ ಮಾಡಿ

ಕಾರಿಗೆ ಜಿಂಕೆ ಅಡ್ಡ ಬಂದು ಕಾರ್ ಪಲ್ಟಿಯಾಗಿ ಮೂವರಿಗೆ ಗಾಯವಾದ ಘಟನೆ ಶುಕ್ರವಾರ ಹೊರನಾಡಿನಿಂದ ಮೂಡಿಗೆರೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಸಂಪಿಗೆಖಾನ್ ಎಂಬಲ್ಲಿ ನಡೆದಿದೆ.

ಮೂಡಿಗೆರೆಯ ಮುತ್ತಿಗೆಪುರ ಗ್ರಾಮದ ಒಂದೇ ಕುಟುಂಬದ ಡ್ರೈವರ್ ಸೇರಿ ನಾಲ್ಕು ಜನ ಹೊರನಾಡಿಗೆ ಬಂದು ದೇವರ ದರ್ಶನ ಮುಗಿಸಿ ಮರಳುತ್ತಿದ್ದ ಸಂದರ್ಭದಲ್ಲಿ ಸಂಪಿಖಾನ್ ಎಂಬಲ್ಲಿ ಕಾರಿಗೆ ಜಿಂಕೆ ಅಡ್ಡ ಬಂದಿದೆ.

ಜಿಂಕೆಯನ್ನು ತಪ್ಪಿಸುವ ಯತ್ನದಲ್ಲಿ ಕಾರು ಚರಂಡಿಗೆ ಉರುಳಿ ಬಿದ್ದಿದೆ. ಕಾರಿನಲ್ಲಿದ್ದ ಮೂವರಿಗೆ ಗಂಭೀರವಾದ ಗಾಯಗಳಾಗಿದೆ. ಒಬ್ಬ ಮಹಿಳೆಗೆ ಕೈ, ಇನ್ನೊಬ್ಬರ ತಲೆಗೂ ಹಾಗೂ ಕಾಲಿಗೆ ಪೆಟ್ಟಾಗಿದ್ದು, ಕೂಡಲೇ ಸ್ಥಳೀಯರು ಕಳಸ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತಂದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ರವಾನೆ ಮಾಡಲಾಗಿದೆ.

Leave a Reply

error: Content is protected !!
%d