ಟೆಂಪೋ ಟ್ರಾವೆಲರ್‌ ಹಾಗೂ ಟಿಪ್ಪರ್‌ ಢಿಕ್ಕಿ; ಪ್ರಯಾಣಿಕರು ಪಾರು

ಶೇರ್ ಮಾಡಿ

ಗುರುವಾಯನಕೆರೆ ಜೈನ್‌ ಪೇಟೆ ಸಮೀಪ ಟೆಂಪೋ ಟ್ರಾವೆಲರ್‌ ಹಾಗೂ ಹಿಟಾಚಿ ಸಾಗಾಟದ ಟಿಪ್ಪರ್‌ ಢಿಕ್ಕಿಯಾದ ಘಟನೆ ಶನಿವಾರ ಸಂಭವಿಸಿದೆ.

ಟ್ರಾವೆಲರ್‌ ವಾಹನದಲ್ಲಿದ್ದ ಚಾಲಕ ಶಿವಕುಮಾರ್‌, ಪ್ರಯಾಣಿಕರಾದ ವಿಪುಲಧನ ರೆಡ್ಡಿ, ಅಯ್ಯಪ್ಪ ರೆಡ್ಡಿ, ಜಸ್ವೀರ್‌ ರೆಡ್ಡಿ, ಯಶ್ವಿ‌ನ್‌ ರೆಡ್ಡಿ, ಅನುರಾಧಾ, ಪದ್ಮ, ಶಿವಕುಮಾರ್‌, ಹರ್ಷಿತ್‌ ರೆಡ್ಡಿ, ರಾಮೇಶ್ವರ ರೆಡ್ಡಿ, ಟಿಪ್ಪರ್‌ ಚಾಲಕ ಮಡಂತ್ಯಾರು ಪಾರೆಂಕಿ ಮಜಲೋಡಿ ನಿವಾಸಿ ಉದಯ ಸಣ್ಣಪುಟ್ಟ ಗಾಯದೊಂದಿಗೆ ಪಾರಾಗಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಂಗಳೂರು ಹಾಗೂ ಆಂಧ್ರದ ಗುಂಟೂರು ಮೂಲದವರು ಟ್ರಾವೆಲರ್‌ನಲ್ಲಿ ಉಡುಪಿಗೆ ತೆರಳುತ್ತಿದ್ದ ವೇಳೆ ಬೆಳ್ತಂಗಡಿ ಕಡೆಗೆ ಸಾಗುತ್ತಿದ್ದ ಟಿಪ್ಪರ್‌ಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಟಿಪ್ಪರ್‌ನ ಮುಂಭಾಗದ ಚಕ್ರ ಕಳಚಿ ಬಿದ್ದಿದೆ.

ಬೆಳ್ತಂಗಡಿ ಸಂಚಾರ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ತಾಸುಗಟ್ಟಲೆ ಟ್ರಾಫಿಕ್‌ ಜಾಮ್‌
ಅಪಘಾತದಿಂದ ಸುಮಾರು ನಾಲ್ಕು ತಾಸು ಟ್ರಾಫಿಕ್‌ ಸಮಸ್ಯೆ ತಲೆದೋರಿತ್ತು. ವಾಹನಗಳು ಸರತಿ ಸಾಲಿನಲ್ಲಿ ಸಿಲುಕಿದ್ದವು. ಇದರಿಂದ ಕಚೇರಿ ಸಹಿತ ಅಗತ್ಯ ಕೆಲಸದ ಮೇರೆಗೆ ತೆರಳುವವರಿಗೆ ಬಹಳಷ್ಟು ಸಮಸ್ಯೆಯಾಯಿತು. ಮತ್ತೂಂದೆಡೆ ಹೆದ್ದಾರಿ ಕಾಮಗಾರಿ ನಡೆಯುತ್ತಿರುವುದರಿಂದ ಟ್ರಾಫಿಕ್‌ ಸಮಸ್ಯೆ ಇನ್ನಷ್ಟು ಹೆಚ್ಚಾಯಿತು.

Leave a Reply

error: Content is protected !!
%d bloggers like this: