ಕುಟುಂಬಕ್ಕೆ ಸಮಯ ನೀಡುತ್ತಿಲ್ಲ ಎಂಬ ಕಾರಣಕ್ಕೆ ಪತ್ನಿಯ ಕೊಲೆ!

ಶೇರ್ ಮಾಡಿ

ಕುಟುಂಬಕ್ಕೆ ಸರಿಯಾಗಿ ಸಮಯ ನೀಡುತ್ತಿಲ್ಲ ಎಂಬ ಕಾರಣಕ್ಕೆ ಹೊಸದಾಗಿ ನೇಮಕವಾದ ಮಹಿಳಾ ಪೊಲೀಸ್‌ ಕಾನ್ಸ್‌ಟೆಬಲ್‌ ಅನ್ನು ಪತಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ.

ಶೋಭಾ ಕುಮಾರಿ(23) ಮೃತ ಮಹಿಳೆಯಾಗಿದ್ದು, ಈಕೆಯ ಪತಿ ಆರೋಪಿ ಗಜೇಂದ್ರ ಯಾದವ್‌ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಗಜೇಂದ್ರ ಜೆಹನಾಬಾದ್‌ನಲ್ಲಿ ಕೋಚಿಂಗ್‌ ಸೆಂಟರ್‌ ನಡೆಸುತ್ತಿದ್ದಾನೆ. ಕೆಲವು ವರ್ಷಗಳ ಹಿಂದೆ ಕೋಚಿಂಗ್‌ ಸೆಂಟರ್‌ನಲ್ಲಿ ಪರಿಚಯವಾದ ಶೋಭಾ ಅವರನ್ನು ಪ್ರೀತಿಸಿ ಮದುವೆಯಾಗಿದ್ದ. ದಂಪತಿಗೆ ಚಿಕ್ಕ ವಯಸ್ಸಿನ ಒಬ್ಬ ಪುತ್ರಿಯಿದ್ದಾಳೆ.

ಪೊಲೀಸ್‌ ಕಾನ್ಸ್‌ಟೆಬಲ್‌ ಆಗಿ ಹೊಸ ಉದ್ಯೋಗಕ್ಕೆ ಸೇರಿದ ನಂತರ ಪತ್ನಿ ತನಗೆ ಹಾಗೂ ಕುಟುಂಬಕ್ಕೆ ಸರಿಯಾಗಿ ಸಮಯ ನೀಡುತ್ತಿಲ್ಲ ಎಂದು ಗಜೇಂದ್ರ ಪದೇ ಪದೆ ಜಗಳ ತೆಗೆಯುತ್ತಿದ್ದ. ಶುಕ್ರವಾರ ಪಾಟ್ನಾಗೆ ಬಂದ ಗಜೇಂದ್ರ, ಹೋಟೆಲ್‌ ರೂಮ್‌ ಬುಕ್‌ ಮಾಡಿದ್ದಾನೆ. ಅಲ್ಲಿಗೆ ಪತ್ನಿಯನ್ನು ಕರೆಸಿದ್ದಾನೆ. ಪುನಃ ಇಬ್ಬರಿಗೂ ಜಗಳ ನಡೆದು, ಹತ್ತಿರದಿಂದ ಶೋಭಾ ಹಣೆಗೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ. ಇದಕ್ಕೂ ಮುನ್ನ ಆಕೆಗೆ ಹಿಂಸೆ ನೀಡಿರುವುದು ಮೃತದೇಹದ ಮೇಲೆ ಆದ ಗುರುತುಗಳಿಂದ ತಿಳಿದುಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Leave a Reply

error: Content is protected !!