ಕಾರು ಢಿಕ್ಕಿ; ಬಾಲಕನಿಗೆ ಗಾಯ

ಶೇರ್ ಮಾಡಿ

ಮದ್ರಸ ಬಿಟ್ಟು ಮನೆಗೆ ತೆರಳುತ್ತಿದ್ದ 7 ವರ್ಷದ ಬಾಲಕನಿಗೆ ಕಾರೊಂದು ಡಿಕ್ಕಿ ಹೊಡೆದ ಘಟನೆ ಬಜ್ಪೆ ಪೊಲೀಸ್‌ ಠಾಣಾ ವ್ಯಾಪ್ತಿಯ ಓಲ್ಡ್ ಏರ್ಪೋರ್ಟ್ ರಸ್ತೆಯ ಬಳಿ ಆರ್ಕೊ ಇಂಡಸ್ಟ್ರೀಸ್‌ ಬಳಿ ವರದಿಯಾಗಿದೆ.

ಬಜ್ಪೆ ನಿವಾಸಿ ನೌಶಾದ್‌ ಹುಸೈನ್‌ ಎಂಬವರ ಮಗ ಅಬ್ದುಲ್‌ ರಕೀಬ್‌ ಹುಸೈನ್(7) ಗಾಯಗೊಂಡ ವಿದ್ಯಾರ್ಥಿ ಎಂದು ತಿಳಿದು ಬಂದಿದೆ.

ಬಾಲಕ ಅಬ್ದುಲ್‌ ರಕೀಬ್‌ ಹುಸೈನ್ ಸಂಜೆ 6:30 ಸುಮಾರಿಗೆ ಮದ್ರಸ ಬಿಟ್ಟು ಮನೆಗೆ ರಸ್ತೆ ಬದಿ ನಡೆದುಕೊಂಡು ಬಜಪೆ ಗ್ರಾಮದ ಓಲ್ಡ್ ಏರ್ಪೋರ್ಟ್ ರಸ್ತೆಯ ಆರ್ಕೊ ಇಂಡಸ್ಟ್ರೀಸ್‌ ಬಳಿಯಲ್ಲಿ ಹೋಗುತ್ತಿದ್ದ ವೇಳೆ ಚಾಲಕ ಗುರುಪ್ರಸಾದ್ ಎಂಬವರು ಕಿನ್ನಿಪದವು ಜಂಕ್ಷನ್ ಕಡೆಯಿಂದ ಮುರಾ ಜಂಕ್ಷನ್ ಕಡೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಬಂದು ಬಾಲಕನಿಗೆ ಡಿಕ್ಕಿ ಹೊಡೆದಿದ್ದಾನೆ ಎಂದು ಬಾಲಕನ ತಂದೆ ನೌಶಾದ್‌ ಹುಸೈನ್‌ ಬಜ್ಪೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ದೂರು ದಾಖಲಿಸಿಕೊಂಡ ಬಜ್ಪೆ ಪೊಲೀಸರು ಆರೋಪಿ ಕಾರು ಚಾಲಕ ಗುರುಪ್ರಸಾದ್‌ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

Leave a Reply

error: Content is protected !!
%d