ಗಾಯಗೊಂಡ ತಂದೆಯ ಚಿಕಿತ್ಸೆಗಾಗಿ 35 ಕಿ.ಮೀ. ಸೈಕಲ್ ರಿಕ್ಷಾ ತುಳಿದ ಮಗಳು

ಶೇರ್ ಮಾಡಿ

ಗಾಯಗೊಂಡ ತಂದೆಯನ್ನು ಜಿಲ್ಲಾ ಕೇಂದ್ರ ಆಸ್ಪತ್ರೆಗೆ ಚಿಕಿತ್ಸೆ ನೀಡಲು 14 ವರ್ಷದ ಮಗಳು ಬರೋಬ್ಬರಿ 35 ಕಿಲೋ ಮೀಟರ್‌ ದೂರದ ವರೆಗೆ ಸೈಕಲ್ ರಿಕ್ಷಾವನ್ನು ತುಳಿದು ಆಸ್ಪತ್ರೆಗೆ ಕರೆತಂದ ಘಟನೆ ಒಡಿಶಾದ ಭದ್ರಕ್‌ನಲ್ಲಿ ಬೆಳಕಿಗೆ ಬಂದಿದೆ.

ಈ ಘಟನೆ ನಡೆದಿರುವುದು ಅಕ್ಟೋಬರ್ 23 ರಂದು ಇದೀಗ ವಿಚಾರ ದೇಶದಾದ್ಯಂತ ಹರಿದಾಡುತ್ತಿದೆ. ತಂದೆಯ ಚಿಕಿತ್ಸೆಗಾಗಿ ಮಗಳೇ ಸೈಕಲ್ ರಿಕ್ಷಾ ತುಳಿದು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು ಇದೀಗ ಸುದ್ದಿಯಾಗುತ್ತಿದೆ.

ಏನಿದು ಪ್ರಕರಣ:
ಭದ್ರಾಕ್ ಜಿಲ್ಲೆಯ ನಾಡಿಗನ್ ಗ್ರಾಮದ ನಿವಾಸಿಯಾಗಿರುವ 14 ವರ್ಷದ ಸುಜಾತಾ ಸೇಥಿ. ಕೆಲ ದಿನಗಳ ಹಿಂದೆ ಸುಜಾತಾ ತಂದೆ ಶಂಭುನಾಥ್ ಯಾವುದೋ ಜಗಳದಲ್ಲಿ ಗಾಯಗೊಂಡಿದ್ದರು. ಅಕ್ಟೋಬರ್ 23 ರಂದು ಸುಜಾತಾ ಗಾಯಗೊಂಡ ತಂದೆಯನ್ನು ಸೈಕಲ್ ರಿಕ್ಷಾದಲ್ಲಿ ಕೂರಿಸಿಕೊಂಡು 14 ಕಿ.ಮೀ ದೂರದಲ್ಲಿರುವ ಧಮ್ನಗರ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ, ಆದರೆ ಶಂಬುನಾಥ್ ಅವರಿಗೆ ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆ ಇದ್ದುದರಿಂದ ಆಸ್ಪತ್ರೆ ವೈದ್ಯರು ಭದ್ರಾಕ್ ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಲು ಸಲಹೆ ನೀಡಿದರು.

ವೈದ್ಯರ ಸಲಹೆಯಂತೆ ತಂದೆಯನ್ನು ಸುಜಾತಾ ಧಮ್ನಗರ್ ಆಸ್ಪತ್ರೆಗೆಯಿಂದ ಭದ್ರಾಕ್ ಜಿಲ್ಲಾ ಆಸ್ಪತ್ರೆಗೆ ತನ್ನ ಸೈಕಲ್ ರಿಕ್ಷಾದಲ್ಲಿ ಕುಳ್ಳಿರಿಸಿ 35 ಕಿ.ಮೀ ದೂರದಲ್ಲಿರುವ ಜಿಲ್ಲಾ ಆಸ್ಪತ್ರೆಗೆ ಕರೆತಂದಿದ್ದಾಳೆ. ಇಲ್ಲಿ ತಪಾಸಣೆ ನಡೆಸಿದ ವೈದ್ಯರು ಅಗತ್ಯ ಔಷಧಿಗಳನ್ನು ನೀಡಿ ಒಂದು ವಾರದ ಬಳಿಕ ಮತ್ತೆ ಆಸ್ಪತ್ರೆಗೆ ಬರುವಂತೆ ಹೇಳಿದ್ದಾರೆ.

ವೈದ್ಯರ ಸೂಚನೆಯಂತೆ ಚಿಕಿತ್ಸೆ ಕೊಡಿಸಿ ಬಳಿಕ ಮತ್ತೆ 35 ಕಿಲೋಮೀಟರ್ ದೂರದಲ್ಲಿರುವ ತನ್ನ ಮನೆಗೆ ಸೈಕಲ್ ರಿಕ್ಷಾ ತುಳಿದು ಮನೆ ತಲುಪಿದ್ದಾಳೆ. ಈ ವೇಳೆ ರಸ್ತೆಯಲ್ಲಿ ಬಾಲಕಿ ತಂದೆಯನ್ನು ಕರೆತರುವ ವೇಳೆ ರಸ್ತೆಯದ್ದ ಕೆಲವರು ಬಾಲಕಿಯನ್ನು ವಿಚಾರಿಸಿದ್ದಾರೆ ಈ ವೇಳೆ ಆಕೆ ತಂದೆಗೆ ಚಿಕಿತ್ಸೆ ನೀಡಬೇಕು ಹಾಗೆ ಅವರನ್ನು ವಾಹನದ ಮೂಲಕ ಕರೆದುಕೊಂಡು ಹೋಗಲು ನನ್ನ ಬಳಿ ಹಣ ಇರಲಿಲ್ಲ ಹಾಗಾಗಿ ಸೈಕಲ್ ರಿಕ್ಷಾದಲ್ಲೇ ಕರೆದುಕೊಂಡು ಹೋಗಲು ನಿರ್ಧರಿಸಿದೆ ಎಂದು ಹೇಳಿದ್ದಾಳೆ.

ವಯಸ್ಸಾದ ತಂದೆ ತಾಯಿಯನ್ನು ಮನೆಯಿಂದ ಹೊರಹಾಕುವ ಕಾಲದಲ್ಲಿ ಈ ಬಾಲಕಿ ತನ್ನ ತಂದೆಯ ಚಿಕಿತ್ಸೆಗೆ ಅಷ್ಟೊಂದು ದೂರ ಸೈಕಲ್ ರಿಕ್ಷಾ ತುಳಿದು ಚಿಕಿತ್ಸೆ ಕೊಡಿಸಿರುವುದು ನಿಜಕ್ಕೂ ಶ್ಲಾಘನೀಯ.

Leave a Reply

error: Content is protected !!
%d