ಮುದ್ದಾಗಿ ಬೆಳೆಸಿದ ಮಗನನ್ನೇ ಮದುವೆಯಾದ 53 ವರ್ಷದ ತಾಯಿ!

ಶೇರ್ ಮಾಡಿ

ಪ್ರೀತಿ ಅನ್ನೋದು ಜಗತ್ತಿನ ಬ್ಯೂಟಿಫುಲ್‌ ಫೀಲಿಂಗ್‌. ಯಾರಿಗೆ ಬೇಕಾದ್ರೂ ಯಾವಾಗ ಬೇಕಾದರೂ ಆಗಬಹುದು. ಆದರೆ, ರಷ್ಯಾದಲ್ಲಿ ತಾಯಿಯೊಬ್ಬಳು ತನ್ನ ಮಗನಿಂದಲೇ ಇಂಥ ಪ್ರೀತಿಯನ್ನು ಪಡೆದುಕೊಂಡಿದ್ದಾಳೆ.

ತಾಯಿ-ಮಗನ ಸಂಬಂಧಕ್ಕೆ ಭಾರತದಲ್ಲಿ ಎಷ್ಟು ಪೂಜ್ಯ ಸ್ಥಾನವಿದೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಆದರೆ, ದೂರದ ರಷ್ಯಾದಲ್ಲಿ ತಾಯಿಯೊಬ್ಬಳು ತಾನು ಬೆಳೆಸಿದ ಮಗನನ್ನೇ ವಿವಾಹವಾಗಿದ್ದಾಳೆ. ಈ ಮದುವೆ ಈಗ ರಷ್ಯಾದಲ್ಲಿ ಸಾಕಷ್ಟು ಸುದ್ದಿಯಾಗಿದೆ.

ತನಗಿಂತ 31 ವರ್ಷ ಕಿರಿಯವನಾದ ಮಲಮಗನನ್ನು ಮದುವೆಯಾಗಿದ್ದಾಳೆ. 53 ವರ್ಷದ ಸಂಗೀತಗಾರ್ತಿಯಾಗಿರುವವ ಅಸಿಲು ಚಿಜೆವ್ಸ್ಕಯಾ ಮಿಂಗಾಲಿಮ್ ತನ್ನ 22 ವರ್ಷದ ಮಲಮಗ ಡೇನಿಯಲ್ ಚಿಜೆವ್ಸ್ಕಿಯನ್ನು ವಿವಾಹವಾಗುವ ಮೂಲಕ ಅಚ್ಚರಿ ಮೂಡಿಸಿದ್ದಾಳೆ.

ರಷ್ಯಾದ ಮಕ್ಕಳ ಕಲ್ಯಾಣ ಇಲಾಖೆ ಕೂಡ ಈ ಮದುವೆಗೆ ಅಚ್ಚರಿ ವ್ಯಕ್ತಪಡಿಸಿದೆ. ರಷ್ಯಾದ ರಿಪಬ್ಲಿಕ್ ಆಫ್ ಟಾಟರ್ಸ್ತಾನ್‌ನ ಕಜಾನ್‌ನಲ್ಲಿರುವ ರೆಸ್ಟೋರೆಂಟ್‌ನಲ್ಲಿ ದಂಪತಿಗಳು ಪರಸ್ಪರ ಒಟ್ಟಾಗಿ ಬಾಳುವುದಾಗಿ ಹಾಗೂ ಸಾಯುವವರೆಗೂ ಜೊತೆಯಾಗಿಯೇ ಇರುವುದಾಗಿ ಪ್ರಮಾಣ ಮಾಡಿ ಮದುವೆಯಾಗಿದ್ದಾರೆ.

Leave a Reply

error: Content is protected !!
%d