ಹೋಮಿಯೋಪತಿ ಒಂದು ವಿಶಿಷ್ಟ ಚಿಕಿತ್ಸಾ ಪದ್ಧತಿ

ಶೇರ್ ಮಾಡಿ

ಪ್ರತಿಯೊಂದು ವೈದ್ಯ ಪದ್ಧತಿಯೂ ಅದರದ್ದೇ ಆದ ಆಧಾರ ತತ್ವಗಳನ್ನು ಹೊಂದಿದೆ. ಹೋಮಿಯೋಪತಿಯಲ್ಲಿ ಏಳು ಮೂಲತತ್ವಗಳನ್ನು ಪರಿಗಣಿಸಬೇಕು

  1. Law of similimum – ಸಾಮ್ಯದ ತತ್ವಗಳು- ಸಮನಾದದ್ದನ್ನು ಸದೃಶ ಗುಣ ಹೊಂದಿದ ಔಷಧಿಯಿಂದ ಗುಣಪಡಿಸಬಹುದು. ಅಂದರೆ ಮೊದಲೇ ಹೇಳಿದಂತೆ similia similibus curentur.
  2. Law of Simplex- ಸರಳ ಔಷಧಿ ತತ್ವ – ಪ್ರಕೃತಿಯಲ್ಲಿ ಸುಲಭವಾಗಿ ದೊರೆಯುವ ಮತ್ತು ಯಾವುದೇ ಹೆಚ್ಚು ಮಿಶ್ರಣವಿಲ್ಲದ ಔಷಧೀಯ ಮೂಲಗಳನ್ನು ಬಳಸುವುದು
  3. Law of minimum – ಕಡಿಮೆ ಪ್ರಮಾಣದ ತತ್ವ – ಅತಿ ಕಡಿಮೆ ಪ್ರಮಾಣದಲ್ಲಿ ಔಷಧವನ್ನು ಕೊಟ್ಟು ವಿಶೇಷ ಪ್ರಯೋಜನವನ್ನು ಪಡೆದುಕೊಳ್ಳುವ ತತ್ವ
  4. Doctrine of Drug Proving- ಔಷಧಿಗಳ ಪ್ರಯೋಗ ತತ್ವ – ಬೇರೆ ಬೇರೆ ವಯೋಮಾನದ ಆರೋಗ್ಯವಂತ ಮನುಷ್ಯರಲ್ಲಿ ಮತ್ತು ಪ್ರಾಣಿಗಳಲ್ಲಿ ವೈಜ್ಞಾನಿಕ ರೀತಿಯಲ್ಲಿ ಔಷಧಿಯನ್ನು ಪ್ರಯೋಗಿಸಿ ಅದರ ಪರಿಣಾಮಗಳನ್ನು ಶಾರೀರಿಕವಾಗಿ ಮತ್ತು ಮಾನಸಿಕವಾಗಿ ತಿಳಿದುಕೊಳ್ಳುವುದು ಮತ್ತು ಆ ಲಕ್ಷಣಗಳನ್ನು ಬರೆದಿಡುವುದು. ಇದನ್ನೇ ಮೆಟೀರಿಯ ಮೆಡಿಕ ಎನ್ನುತ್ತಾರೆ.
  5. Doctrine of Drug dynamization – ಔಷಧಿಯನ್ನು ಕ್ರಿಯಾಶೀಲಗೊಳಿಸುವ ತತ್ವ- ಭೌತಿಕವಾಗಿ ಜಡ ವಾಗಿರುವ ವಸ್ತುವನ್ನು ನಿರ್ದಿಷ್ಟ ಕ್ರಮದಲ್ಲಿ ವಿಭಜನೆ ಮಾಡಿ ಅದರ ಔಷಧೀಯ ಗುಣವನ್ನು ಹೊರ ತರುವಿಕೆ.
  6. Theory of Vital force- ಜೀವಸತ್ವದ ಶಾಸ್ತ್ರ – ಶರೀರದಲ್ಲಿ ಸಂಚರಿಸುವ ಅಗೋಚರ ಜೀವಸತ್ವದ ಏರುಪೇರಿನಿಂದಾಗಿ ಕಾಯಿಲೆಗಳು ಉತ್ಪತ್ತಿಗೊಳ್ಳುವಿಕೆ ಮತ್ತು ಅದನ್ನು ಹೋಮಿಯೋಪತಿಯ ಮುಖಾಂತರ ಸರಿಪಡಿಸುವಿಕೆ.
  7. Theory of Chronic diseases – ದೀರ್ಘಕಾಲೀನ ವ್ಯಾಧಿ ಶಾಸ್ತ್ರ – ಆಯುರ್ವೇದದಲ್ಲಿ ರೋಗ ಮೂಲವನ್ನು ವಾತ ಪಿತ್ತ ಕಫ ಎಂದು ಹೇಗೆ ವಿವರಿಸಿದ್ದಾರೋ ಅದೇ ರೀತಿ ಹೋಮಿಯೋಪತಿಯಲ್ಲಿ ರೋಗ ಮೂಲವನ್ನು Psora(ಸೋರಾ) Sycosis(ಸೈಕೋಸಿಸ್) Syphilis (ಸಿಫಿಲಿಸ್) ಎಂಬ ಮೂರು ಅಂಶಗಳಿಂದ ವಿವರಿಸುತ್ತಾರೆ.

ಮುಂದಿನ ದಿನಗಳಲ್ಲಿ ರೋಗಗಳು ಮತ್ತು ಅದರ ಹೋಮಿಯೋಪತಿ ಚಿಕಿತ್ಸೆಗಳ ಬಗ್ಗೆ ಬರೆಯುವೆ..
ಮುಂದುವರಿಯುವುದು…

✍🏻 ಡಾ. ಅನೀಶ್ ಕುಮಾರ್ ಸಾದಂಗಾಯ

BHMS, MD(Hom)
ಜ್ಯೋತಿವೈದ್ಯ ಹೋಮಿಯೋ ಕ್ಲಿನಿಕ್, ದುರ್ಗಾಶ್ರೀ ಟವರ್ಸ್, ನೆಲ್ಯಾಡಿ
9900224260

Leave a Reply

error: Content is protected !!