ನೆಲ್ಯಾಡಿ: ಪರಿಸರದಲ್ಲಿ ಹಣ ಕಳೆದುಕೊಂಡಿದ್ದ ಪಶ್ಚಿಮ ಬಂಗಾಳದ ಹೆಮಾಜುದ್ದೀನ್ ಎಂಬವರಿಗೆ ಸೇರಿದ ರೂ 30,000/- ವನ್ನು ಅತಿ ವಂದನೀಯ ಪಿ.ಕೆ ಅಬ್ರಹಾಂ ಕೋರ್ಎಪಿಸ್ಕೋಪೋ ಇವರ ಸಮ್ಮುಖದಲ್ಲಿ ವಾರಸುದಾರರಿಗೆ ನೀಡಲಾಯಿತು.
ನೆಲ್ಯಾಡಿ ಪರಿಸರದಲ್ಲಿ ಸೈಜನ್ ಅಬ್ರಹಾಂ, ವನಸುಮ ಪ್ರಿಂಟರ್ಸ್‌ನ ಮಾಲಕರಾದ ವಿನಯ ರಾವ್ ಮತ್ತು ಆದರ್ಶ ಎಂಬವರಿಗೆ ಹಣ ದೊರೆತಿದ್ದು, ಈ ಬಗ್ಗೆ ವಾಟ್ಸಪ್ ಗ್ರೂಪ್ ಗಳಲ್ಲಿ ಮಾಹಿತಿಗಳನ್ನು ನೀಡಲಾಗಿತ್ತು.
ಮಾಹಿತಿಯ ಆಧಾರದ ಮೇಲೆ ನೆಲ್ಯಾಡಿಯ ಲಿಝ ಫ್ರುಟ್ಸ್ ಮತ್ತು ವೆಜಿಟೇಬಲ್ಸ್ ಮಾಲಕರಾದ ಲತೀಫ್ ಇವರ ಮಾಹಿತಿಯಂತೆ ಸರಿಯಾದ ಸಾಕ್ಷ್ಯ ನೀಡಿದ ವಾರಸುದಾರರಾದ ಹೆಮಾಜುದ್ದೀನ್ ಇವರಿಗೆ ಹಣವನ್ನು ಹಿಂದಿರುಗಿಸಲಾಯಿತು.