
ಎಲ್ಲಾ ಮನೆಗಳಲ್ಲಿ ಪೂಜಾ ಕೊಠಡಿ ಅಥವಾ ಪೂಜೆಗಾಗಿ ವಿಶೇಷ ಮಂದಿರ ಇರುತ್ತದೆ. ಮನೆಯಲ್ಲಿ ಪೂಜಾ ಕೋಣೆ ಇದ್ದರೆ ಶಾಂತಿ ಮತ್ತು ಧನಾತ್ಮಕ ಶಕ್ತಿ ಹೆಚ್ಚುತ್ತದೆ. ಮನ- ಮನೆಯಲ್ಲಿ ಧನಾತ್ಮಕ ಶಕ್ತಿ ಇರುತ್ತದೆ. ಹಿಂದೂ ಸಂಪ್ರದಾಯದ ಪ್ರಕಾರ.. ಅದರ ವಿಧಾನಗಳ ಪ್ರಕಾರ ದೇವರ ವಿಗ್ರಹಗಳು ಅಥವಾ ಫೋಟೋಗಳು ಸಾಕಷ್ಟಿರುತ್ತವೆ. ಅದಕ್ಕೆ ಕಾಲಕಾಲಕ್ಕೆ ಪೂಜೆಪುನಸ್ಕಾರಗಳೂ ನಡೆಯುತ್ತವೆ. ಹಿಂದೂ ಧರ್ಮದಲ್ಲಿ ಜಲವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಪ್ರತಿಯೊಂದು ಆಚರಣೆಗೂ ನೀರು ಅಥವಾ ಜಲ ಅತ್ಯಗತ್ಯ. ಹಾಗಾಗಿ ಪೂಜಾ ಕೊಠಡಿ ಅಥವಾ ದೇವ ಮಂದಿರದಲ್ಲಿ ಒಂದು ಲೋಟ ಅಥವಾ ಪಂಚಪಾತ್ರೆಯಲ್ಲಿ ನೀರು ತುಂಬಿಡಬೇಕು ಎನ್ನುತ್ತಾರೆ ವಾಸ್ತು ಶಾಸ್ತ್ರ ತಜ್ಞರು.
ಪೂಜಾ ಕೊಠಡಿ ಅಥವಾ ದೇಗುಲದಲ್ಲಿ ನೀರಿನ ಪಾತ್ರೆ ಇಡುವುದರಿಂದ ಮನೆಯ ಸಂಪತ್ತು ಹೆಚ್ಚುತ್ತದೆ. ನೀರು ತುಂಬಿದ ಪಾತ್ರೆಗಳನ್ನು ಮನೆಯ ಉತ್ತರ ಅಥವಾ ಈಶಾನ್ಯ ಮೂಲೆಯಲ್ಲಿ ಇಡಬೇಕು. ನೀರನ್ನು ಸಂಗ್ರಹಿಸಲು ತಾಮ್ರ ಅಥವಾ ಯಾವುದೇ ಲೋಹದ ಪಾತ್ರೆಯನ್ನು ಬಳಸಿ. ತಾಮ್ರದ ಪಾತ್ರೆಯಲ್ಲಿ ನೀರನ್ನು ಸಂಗ್ರಹಿಸುವುದರಿಂದ ಪ್ರತಿಕೂಲತೆಯನ್ನು ಹೀರಿಕೊಳ್ಳುತ್ತದೆ. ಪೂಜೆ ಮಾಡುವ ಮೊದಲು ಈ ನೀರನ್ನು ಪ್ರತಿದಿನ ಬದಲಾಯಿಸಬೇಕು. ಪೂಜೆಯನ್ನು ಮಾಡುವ ಮೊದಲು, ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ತರಲು ಎಲ್ಲ ಮೂಲೆಯಲ್ಲಿಯೂ ಆ ನೀರನ್ನು ಚಿಮುಕಿಸಬೇಕು.
ಹಿಂದೂ ಸಂಪ್ರದಾಯಗಳ ಪ್ರಕಾರ ದೇವತೆಗಳನ್ನು ಪೂಜಿಸುವ ಮೊದಲು ವಿಗ್ರಹಗಳನ್ನು ನೀರಿನಿಂದ ತೊಳೆಯಬೇಕು ಮತ್ತು ಅದನ್ನು ಮನೆಯಾದ್ಯಂತ ಚಿಮುಕಿಸಬೇಕು. ಹೀಗೆ ಮಾಡುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚುತ್ತದೆ. ಮನೆಯನ್ನು ಯಾವಾಗಲೂ ಸ್ವಚ್ಛವಾಗಿಡಿ. ಹೀಗೆ ಮಾಡಿದರೆ ದೇವರ ಅನುಗ್ರಹ ಸಿಗುತ್ತದೆ.
ಪೂಜೆ ಮಾಡುವಾಗ ಕೆಲವು ತುಳಸಿ ಎಲೆಗಳನ್ನು ಪಂಚಪಾತ್ರೆಯಲ್ಲಿ ಇಡಬೇಕು. ತುಳಸಿ ನೀರು ಅಂದರೆ ತೀರ್ಥ ಪವಿತ್ರವಾದುದು. ಪೂಜೆ ಆರಂಭಿಸುವಾಗ ಈ ನೀರನ್ನು ಮನೆಯ ಕೋಣೆಗಳಲ್ಲಿ ಚಿಮುಕಿಸಬೇಕು. ತುಳಸಿಯು ಅದರ ಔಷಧೀಯ ಗುಣಗಳಿಗೆ ಹೆಸರುವಾಸಿಯಾಗಿದೆ, ಇದು ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ.

