ನಾಗರ ಹಾವು ಓಡಿಸಲು ಹೊಗೆ ಹಾಕಿದ ಕುಟುಂಬ- ಇಡೀ ಮನೆ ಭಸ್ಮ

ಶೇರ್ ಮಾಡಿ

ಮನೆಯೊಳಗೆ ಸೇರಿಕೊಂಡಿದ್ದ ನಾಗರಹಾವನ್ನು ಓಡಿಸುವ ಸಲುವಾಗಿ ಮನೆ ಮಂದಿ ಹೊಗೆ ಹಾಕಿದ್ದಾರೆ. ಆದರೆ ಈ ಹೊಗೆ ಇಡೀ ಮನೆಯನ್ನೇ ಭಸ್ಮವಾಗಿಸಿದ ಪ್ರಕರಣವೊಂದು ಉತ್ತರಪ್ರದೇಶದಲ್ಲಿ ನಡೆದಿದೆ.

ಈ ಘಟನೆ ಉತ್ತರಪ್ರದೇಶದ ಬಂದ ಎಂಬಲ್ಲಿ ಭಾನುವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ನಡೆದಿದೆ. ಬೆಳಗ್ಗೆ ಕುಟುಂಬದ ಸದಸ್ಯರೊಬ್ಬರು ಮನೆಯೊಳಗೆ ಹಾವು ಸೇರಿಕೊಂಡಿದ್ದನ್ನು ಗಮನಿಸಿದ್ದಾರೆ. ಕೂಡಲೇ ಮನೆ ಮಂದಿಗೆ ಅವರು ತಿಳಿಸಿದ್ದು, ಎಲ್ಲರೂ ಸೇರಿ ಹಾವನ್ನು ಓಡಿಸುವ ಪ್ರಯತ್ನ ಮಾಡಿದ್ದಾರೆ.

ಏನೇ ಮಾಡಿದರೂ ಹಾವು ಮನೆಯಿಂದ ಹೊರ ಹೋಗಲೇ ಇಲ್ಲ. ಹೀಗಾಗಿ ಹಸುವಿನ ಸೆಗಣಿ (ಭರಣಿ) ಮೂಲಕ ಹೊಗೆ ಹಾಕಿದ್ದಾರೆ. ಈ ಹೊಗೆಯಿಂದ ಬೆಂಕಿ ಮನೆಪೂರ್ತಿ ಹರಡಿಕೊಂಡಿದೆ. ಇಡೀ ಮನೆಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಮನೆಯಲ್ಲಿದ್ದ ನಗದು, ಚಿನ್ನಾಭರಣ ಹಾಗೂ ಹಲವಾರು ಕ್ವಿಂಟಾಲ್ ಇದ್ದ ಧಾನ್ಯಗಳು ಭಸ್ಮವಾದವು.

Leave a Reply

error: Content is protected !!