ರೌಡಿ ಶೀಟರ್ ಮೇಲೆ ಪೊಲೀಸರು ಫೈರಿಂಗ್ ಮಾಡಿದ ಘಟನೆ ಜಿಲ್ಲೆ ಎನ್.ಆರ್.ಪುರ ತಾಲೂಕಿನಲ್ಲಿ ನಡೆದಿದೆ.
ರೌಡಿ ಶೀಟರ್ ಪೂರ್ಣೇಶ್ ಎಂಬವರ ಮೇಲೆ ಎನ್.ಆರ್. ಪುರ ತಾಲೂಕಿನ ಬಾಳೆಹೊನ್ನೂರು ಪೊಲೀಸರಿಂದ ಫೈರಿಂಗ್ ನಡೆದಿದೆ ಎನ್ನಲಾಗಿದೆ.
ವಾರಂಟ್ ಜಾರಿಯಾಗಿದ್ದರೂ ಕೋರ್ಟಿಗೆ ಹೋಗದ ಪೂರ್ಣೇಶ್ ನನ್ನು ಬಂಧಿಸಲು ಹೋದಾಗ ಆತ ಪೊಲೀಸರ ಮೇಲೆ ಫೈರಿಂಗ್ ಹಾಗೂ ಪೊಲೀಸರ ಮೇಲೆಯೇ ಚಾಕುವಿಂದ ಹಲ್ಲೆಗೈದಾಗ ಪೊಲೀಸರು ಫೈರಿಂಗ್ ನಡೆಸಿದ್ದಾರೆ.
ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿದರೂ ಮಾತು ಕೇಳದ ಪೂರ್ಣೇಶ್ ಕಾಲಿಗೆ ಫೈರಿಂಗ್ ಮಾಡಿದ ಪಿ.ಎಸ್.ಐ. ದಿಲೀಪ್ ಕುಮಾರ್.
ರೌಡಿಯಿಂದ ಹಲ್ಲೆಗೊಳಗಾದ ಪೇದೆ ಮಂಜುನಾಥ್ ಬಾಳೆಹೊನ್ನೂರು ಆಸ್ಪತ್ರೆಗೆ ದಾಖಲಾಗಿದ್ದು, ಆರೋಪಿ ಪೂರ್ಣೇಶ್ ನನ್ನು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.